ಬೆಂಗಳೂರು:ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (UVCE), ಕೆ.ಆರ್. ವೃತ್ತ, ಬೆಂಗಳೂರು ಇಲ್ಲಿನ 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಿ.ಟೆಕ್ / ಎಂ.ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ (Mathematics) ಬೋಧಿಸಲು ಅರ್ಹ ಅಭ್ಯರ್ಥಿಗಳಿಂದ ಅತಿಥಿ ಉಪನ್ಯಾಸಕರ (Guest Lecturer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ ಹಾಗೂ ನಿಬಂಧನೆಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು AICTE / UGC ನಿಯಮಗಳಿಗನುಸಾರವಾಗಿ Ph.D ಅಥವಾ PG ಪದವಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.uvce.karnataka.gov.in ನಿಂದ ನಿಗದಿತ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು 2026ನೇ ಅಕ್ಟೋಬರ್ 21 ಅಥವಾ ಅದಕ್ಕೂ ಮುಂಚಿತವಾಗಿ ‘ಕುಲಸಚಿವರ ಕಛೇರಿ, ಯು.ವಿ.ಸಿ.ಇ, ಕೆ.ಆರ್. ವೃತ್ತ, ಬೆಂಗಳೂರು’ ಇಲ್ಲಿಗೆ ಸಲ್ಲಿಸತಕ್ಕದ್ದು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಅಥವಾ ನೇರವಾಗಿ ತಿಳಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕುಲಸಚಿವರು (ಯು.ವಿ.ಸಿ.ಇ) ಅಥವಾ ಪ್ರಭಾರ ಪ್ರಾಧ್ಯಾಪಕರು (ಇಂಜಿನಿಯರಿಂಗೇತರ ಕೋರ್ಸ್‌ಗಳು) ಅವರನ್ನು ಸಂಪರ್ಕಿಸಬಹುದು.
