ಸಮಗ್ರ ಸುದ್ದಿ

ಮೈಸೂರಿನ ಅರಮನೆಯ ದಸರಾ ವೇದಿಕೆಯಲ್ಲಿ ಗಾಯಕ ರಘು ದೀಕ್ಷಿತ್ ಸಂಗೀತ ಜಾದೂ

Share

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸ ಪ್ರಸಿದ್ಧ ಅರಮನೆಯ ಮುಂಭಾಗ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್ ಅವರು ತಮ್ಮ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಭವ್ಯ ಅರಮನೆಯ ವಾತಾವರಣದಲ್ಲಿ ನಡೆದ ಈ ಸಂಗೀತ ಸಾಂಸ್ಕೃತಿಕ ಸಂಜೆಯು ನೆರೆದಿದ್ದ ಕಲಾಪ್ರೇಮಿಗಳಿಗೆ ಮರೆಯಲಾಗದ ವೈಭವದ ಅನುಭವವನ್ನು ನೀಡಿತು.

ಇಂದು ಅರಮನೆ ವೇದಿಕೆಯಲ್ಲಿ ಆಯೋಜಿಸಿದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್  ಅವರು ಮಾತನಾಡಿ  ಮೈಸೂರಿಗೆ ಬಂದು, ತಮ್ಮ ತವರುೂರಿಗೆ ಬಂದು, ಜನರ ಮುಂದೆ ಕಾರ್ಯಕ್ರಮ ಕೊಡುವ ಸೌಭಾಗ್ಯ ಸಿಕ್ಕಿರುವುದು ದೊಡ್ಡ ಸಂತೋಷ ಅರಮನೆಯ ಮುಂದೆ ಇಷ್ಟು ಜನ, ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ನೋಡಲು ಎರೆಡು ಕಣ್ಣುಗಳು ಸಾಲದು ಎಂದರು.

ಬೆಂಗಳೂರಿನ ಆಯನಾ ಡಾನ್ಸ್ ಕಂಪನಿಯೊಂದಿಗೆ ಸೇರಿ ಈ ಹಿಂದೆ ಹಲವು ಉತ್ತಮ ಪ್ರದರ್ಶನಗಳನ್ನು ನೀಡಲಾಗಿತ್ತು.  ಇದೇ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ನೀಡಿದ್ದು, ಮೈಸೂರು ಮಹಾರಾಜರು ಇಲ್ಲಿಗೆ ಕರೆಸಿಕೊಂಡು ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಟ್ಟರು ಎಂದು ಹೇಳಿದರು.

ವೇದಿಕೆ ಮೇಲೆ ತಮ್ಮ ತಂಡವದರಾದ  ವಯೋಲಿನ್ ವಾದನದಲ್ಲಿ ಅಕ್ಷಯ್ ಗಣೇಶ್, ಡ್ರಮ್ಸ್ ವಾದನದಲ್ಲಿ ಜಾರ್ಜ್ ಜೇಕಬ್,  ಕೊಳಲು ವಾದನವನ್ನು ಗೌತಮ್ ಹೆಗ್ಡೆ,  ಗಿಟಾರ್ ವಾದನದಲ್ಲಿ ಸಂಜಯ್ ಕುಮಾರ್ ಅವರನ್ನು ಪರಿಚಯಿಸಿದ್ದರು..

ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸ ಪ್ರಸಿದ್ಧ ಅರಮನೆಯ ಮುಂಭಾಗ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಪ್ರಸಿದ್ಧ ಗಾಯಕ ರಘು ದೀಕ್ಷಿತ್ ಅವರು ತಮ್ಮ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ರಂಜಿಸಿದರು. ಅರಮನೆಯ  ವಾತಾವರಣದಲ್ಲಿ ನಡೆದ ಈ ಸಂಗೀತ ಸಾಂಸ್ಕೃತಿಕ ಸಂಜೆಯು ನೆರೆದಿದ್ದ ಪ್ರೇಕ್ಷಕರಿಗೆ ಮರೆಯಲಾಗದ  ವೈಭವದ ಅನುಭವವನ್ನು ನೀಡಿತು.

ತಮ್ಮ ವಿಶಿಷ್ಟ ಜಾನಪದ ಹಾಗೂ ರಾಕ್ ಫ್ಯೂಷನ್ ಶೈಲಿಗೆ ಹೆಸರಾಗಿರುವ  ಅವರು, ವೇದಿಕೆ ಆಗಮಿಸುತ್ತಿದ್ದಂತೆಯೇ ಪ್ರೇಕ್ಷಕರಿಂದ ಭಾರಿ ಸದ್ದು ಮಾಡಿದರು. ತಮ್ಮ ಕಂಠಸಿರಿಯಿಂದ ನಿನ್ನ ಪೂಜೆಗೆ ಬಂದೇ ಮಹದೇಶ್ವರ, ಹೇ ಭಗವಾನ್  ಮುಂಜಾನೆ  ಮಂಜಲ್ಲಿ, ಕೋಡಗನ ಕೋಳಿ ನುಂಗಿತ್ತಾ, ಸೇರಿದಂತೆ ತಮ್ಮ ವೃತ್ತಿಜೀವನದ ಸೂಪರ್ ಹಿಟ್ ಹಾಡುಗಳನ್ನು ಒಂದಾದ ಮೇಲೊಂದರಂತೆ ಪ್ರಸ್ತುತಪಡಿಸಿದರು. ಪ್ರತಿಯೊಂದು ಹಾಡಿಗೂ ಯುವಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಅವರ ಧ್ವನಿ ಸಮ್ಮಿಳಿತಗೊಂಡು ಇಡೀ ವಾತಾವರಣವನ್ನು ಸಂಗೀತಮಯವಾಗಿಸಿತು. ಪ್ರೇಕ್ಷಕರು ತಮ್ಮ ನೆಚ್ಚಿನ ಹಾಡುಗಳಿಗೆ ಧ್ವನಿಗೂಡಿಸುವ ಮೂಲಕ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.  ಅವರ  ಗಾಯನ ಹಾಗೂ ಪ್ರಮುಖ ಹಾಡುಗಳ ಪ್ರದರ್ಶನವು ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುವಂತಹ ಮಧುರ ಸಂಜೆಯಾಗಿ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿತ್ತು.

ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ನಿತೇಶ್ ಕುಮಾರ್ ಪಾಟೀಲ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಎಸ್.ಯುಕೇಶ್ ಕುಮಾ‌ರ್, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಅರಮನೆ ಮಂಡಳಿ ಉಪ ನಿರ್ದೇಶಕರು ಟಿ.ಎಸ್. ಸುಬ್ರಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಡಾ.ಎಂ.ಡಿ. ಸುದರ್ಶನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page