ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗವು ತನ್ನ ಅಧಿಕೃತ ವೆಬ್‍ಸೈಟ್ ವಿಳಾಸವನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ಆಯೋಗದ ಹಳೆಯ ವೆಬ್‍ಸೈಟ್ ವಿಳಾಸÀ https://Kpsc.Kar.Nic.in ಅನ್ನು ಬದಲಾಯಿಸಿ, https://Kpsc.Karnataka.gov.in ಎಂಬ ಹೊಸ ವಿಳಾಸವನ್ನು ಮಾಡಿದೆ.
ಸಾರ್ವಜನಿಕರು ಹಾಗೂ ಉದ್ಯೋಗಾಕಾಂಕ್ಷಿಗಳ ಇನ್ನು ಮುಂದೆ ಕೆಪಿಎಸ್‍ಸಿ ಗೆ ಸಂಬಂಧಿಸಿದ ಮಾಹಿತಿಯನ್ನು ಈ ಹೊಸ ವೆಬ್‍ಸೈಟ್ ಅನ್ನು ಸಂಪರ್ಕಿಸಬೇಕಾಗಿ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.
ಆಯೋಗದ ನೂತನ ವೆಬ್‍ಸೈಟ್ ಈಗಾಗಲೇ ಅಧಿಕೃತವಾಗಿ ಚಾಲ್ತಿಗೆ ಬಂದಿದ್ದು, ಇನ್ನು ಮುಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ, ನೇಮಕಾತಿ ಅಧಿಸೂಚನೆಗಳು ಹಾಗೂ ವಿವರಗಳನ್ನು ನೂತನ ವೆಬ್‍ಸೈಟ್ https://Kpsc.Karnataka.gov.in ಮುಖಾಂತರವೇ ಪಡೆಯಬೇಕೆಂದು ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿ ಕೆ. ಜ್ಯೋತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
