ಸಮಗ್ರ ಸುದ್ದಿ

ಕರ್ನಾಟಕ ಜಾನಪದ ಅಕಾಡೆಮಿ 2026ನೇ ಸಾಲಿಗೆ 30 ಹಿರಿಯ ಕಲಾವಿದರು, ಇಬ್ಬರು ವಿದ್ವಾಂಸರಿಗೆ ವಾರ್ಷಿಕ ಗೌರವ ಹಾಗೂ ತಜ್ಞ ಪ್ರಶಸ್ತಿಗಳು ಪ್ರಕಟ

Share

ಬೆಂಗಳೂರು:ಕರ್ನಾಟಕ ಜಾನಪದ ಅಕಾಡೆಮಿಯ 2026ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಳ ಪಟ್ಟಿಯನ್ನು  ಅಕಾಡೆಮಿಯ ಅಧ್ಯಕ್ಷರಾದ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಅಧಿಕೃತವಾಗಿ ಪ್ರಕಟ ಮಾಡಿದರು.

ಇಂದು ಮಂಡ್ಯ ಜಿಲ್ಲೆಯ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ 2026 ನೇ ಸಾಲಿಗೆ 30 ಹಿರಿಯ ಕಲಾವಿದರು ಹಾಗೂ ಇಬ್ಬರು ವಿದ್ವಾಂಸರನ್ನು ವಾರ್ಷಿಕ ಗೌರವ ಹಾಗೂ ತಜ್ಞ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅಧ್ಯಕ್ಷರು, 1980ರಿಂದಲೂ ಕಾರ್ಯನಿರ್ವಹಿಸುತ್ತ ಬಂದಿರುವ ಕರ್ನಾಟಕ ಜಾನಪದ ಅಕಾಡೆಮಿಯು ಜಾನಪದ ಕಲೆ ಮತ್ತು ಸಂಸ್ಕøತಿಯ ಉಳಿವಿಗೆ ಶ್ರಮಿಸುತ್ತಿರುವ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿದೆ. 1980ರಿಂದ 2025ರವರೆಗೆ ಒಟ್ಟು 1,251 ಗೌರವ ಪ್ರಶಸ್ತಿಗಳನ್ನು (1,134 ಕಲಾವಿದರು ಮತ್ತು 117 ವಿದ್ವಾಂಸರು) ನೀಡಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿಯ ವಿವರಗಳು:
ವಾರ್ಷಿಕ ಗೌರವ ಪ್ರಶಸ್ತಿ: 2026-27ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಒಟ್ಟು 30 ಹಿರಿಯ ಜಾನಪದ ಕಲಾವಿದರಿಗೆ ಈ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯು ರೂ. 25,000/- ನಗದು, ಸ್ಮರಣಿಕೆ, ಶಾಲು, ಹಾರ ಹಾಗೂ ಫಲತಾಂಬೂಲವನ್ನು ಒಳಗೊಂಡಿದೆ.

ತಜ್ಞ ಪ್ರಶಸ್ತಿ: ಇಬ್ಬರು ಹಿರಿಯ ಜಾನಪದ ವಿದ್ವಾಂಸರಿಗೆ ತಲಾ ರೂ. 50,000/- ನಗದು ಹಾಗೂ ಗೌರವ ಸಮರ್ಪಣೆಯೊಂದಿಗೆ ತಜ್ಞ ಪ್ರಶಸ್ತಿ ನೀಡಲಾಗುತ್ತದೆ.
ಅಕ್ಟೋಬರ್ 14, ರಂದು ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ ಈ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.

2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ:

ಬೆಂಗಳೂರು ನಗರ: ಎಸ್. ಎಂ. ರಾಜಣ್ಣ (ಜಾನಪದ ಗಾಯನ)
ಬೆಂಗಳೂರು ಗ್ರಾಮಾಂತರ: ಶಂಕರ್ ಭಾರತೀಪುರ (ಜಾನಪದ ಗಾಯನ)
ಬೆಂಗಳೂರು ದಕ್ಷಿಣ: ಮಾಯಣ್ಣ (ಪೂಜಾ ಕುಣಿತ)
ಕೋಲಾರ: ಎ.ಎಲ್. ವೆಂಕಟೇಶ್ (ಬುರ್ರ ಕಥೆ)
ಚಿಕ್ಕಬಳ್ಳಾಪುರ: ಡಾ. ಸೋ.ಸು. ನಾಗೇಂದ್ರನಾಥ್ (ಜಾನಪದ ಗಾಯನ)
ತುಮಕೂರು: ವೀರೇಶ್ ಕುಮಾರ್ ಸಿ.ವಿ. (ವೀರಗಾಸೆ)
ದಾವಣಗೆರೆ: ಹೆಚ್.ಬಿ.ಬಸವರಾಜು (ಕೀಲು ಕುದುರೆ)
ಚಿತ್ರದುರ್ಗ: ಕೋಲಾಟದ ನರಸಪ್ಪ (ಕೋಲಾಟ)
ಶಿವಮೊಗ್ಗ: ಬಿ.ಟಿ.ಸುಮಿತ್ರಾ (ಮಹಿಳಾ ಡೊಳ್ಳು)
ಮೈಸೂರು: ಮಹೇಶ್ ಕೆ.ಎನ್. (ವೀರಗಾಸೆ)
ಮಂಡ್ಯ: ಟಿ. ತಿಮ್ಮೇಶ್ (ಜಾನಪದ ಗಾಯನ)
ಹಾಸನ: ಎಸ್.ಎನ್.ನಿಂಗಪ್ಪ (ಜಾಣಪದ ಕೋಲಾಟ ಮತ್ತು ರಂಗ ಕುಣಿತ)
ಚಿಕ್ಕಮಗಳೂರು: ರಾಮಪ್ಪ ಡಿ (ಜಾನಪದ ಗಾಯನ)
ಚಾಮರಾಜನಗರ: ಸಿ.ಎಂ. ನರಸಿಂಹಮೂರ್ತಿ (ಜಾಣಪದ ಗಾಯನ)
ದಕ್ಷಿಣ ಕನ್ನಡ: ಸುಬ್ಬಣ್ಣ ಪಂಡಿತ್ (ದೈವನರ್ತನ)
ಉಡುಪಿ: ಬೈಲೂರು ಗೋವಿಂದರಾಜಶೆಟ್ಟಿ (ಭಜನೆ)
ಕೊಡಗು: ರಮೇಶ್ ಜೆ.ಬಿ. (ಜಾನಪದ ನೃತ್ಯ)
ಬೆಳಗಾವಿ: ಹಣಮಂತ ಗೋವಿಂದಪ್ಪ ಹೂಗಾರ (ಸಂಬಾಳ ವಾದನ)
ಧಾರವಾಡ: ಬಸಣ್ಣ ಶಿವಬಸಪ್ಪ ಮುಳಗುಂದ (ತಂಬೂರಿ ಪದ, ತತ್ವಪದ)
ಕಲಬುರ್ಗಿ: ಸೂರ್ಯಕಾಂತ ಪೂಜಾರಿ (ಜಾನಪದ ಗಾಯನ)
ವಿಜಯಪುರ: ಭೀಮಬಾಯಿ ಗೌಡತಿ ಭೀಮನಗೌಡ ಬಿರಾದಾರ (ಸಂಪ್ರದಾಯದ ಪದ)
ಬಾಗಲಕೋಟೆ: ದಾನಯ್ಯ ಮಹಾಲಿಂಗಯ್ಯ ಮಠಪತಿ (ಕರಡಿ ಮೇಳ)
ಉತ್ತರ ಕನ್ನಡ: ಪುರುಷೋತ್ತಮ ಗೌಡ( ಹಾಲಕ್ಕಿ ಸುಗ್ಗಿ ಕುಣಿತ)
ಹಾವೇರಿ: ಕಲ್ಲಪ್ಪ ಜಿಜಪ್ಪ ಬಗರಿಕಾರ (ಚರ್ಮ ವಾದ್ಯ ತಯಾರಿಕೆ)
ಗದಗ-ಗೌಡಪ್ಪ ವೆಂಕಪ್ಪ ಬೊಮ್ಮನವರ(ಜಾನಪದ ಸಂಗೀತ)
ಬೀದರ್-ದೇವದಾಸ ಚಿಮಕೋಡ (ಜಾನಪದ ಗಾಯನ)
ರಾಯಚೂರು: ಸ.ಹುಲಿಗೆಪ್ಪ (ಜಾನಪದ ಗಾಯನ)
ಕೊಪ್ಪಳ: ಮುದಕವ್ವ ಗಂಜಾಳ (ಮಾದರ) (ಗೀಗೀ ಪದ)
ಬಳ್ಳಾರಿ: ಎನ್.ಬಿ.ಹಸೇನ್ ಬಾಷ (ತಾಷಾರಂ ಡೋಲಿ)
ಯಾದಗಿರಿ: ಶರಣಪ್ಪ (ಡೊಳ್ಳಿನ ಪದ) ಹಿರಿಯ ಕಲಾವಿದರನ್ನು ಪ್ರಶಸ್ತಿಗಾಗಿ ಘೋಷಿಸಲಾಗಿದೆ.

ತಜ್ಞ ಪ್ರಶಸ್ತಿ ಪುರಸ್ಕೃತರು:

ಡಾ. ಎಂ. ಬೈರೇಗೌಡ (ಬೆಂಗಳೂರು ದಕ್ಷಿಣ) – ಡಾ. ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿ
ಡಾ. ವಿ. ಎಲ್. ಪಾಟೀಲ (ಧಾರವಾಡ) – ಡಾ. ಬಿ.ಎಸ್. ಗದ್ದಿಗಿ ಮಠ ಜಾನಪದ ತಜ್ಞ ಪ್ರಶಸ್ತಿ

ಪತ್ರಿಕಾ ಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಡಾ. ಕೆಂಪಮ್ಮ, ಮಂಜೇಶ್ ಚೆನ್ನಾಪುರ ಹಾಗೂ ಕೆಂಕೆರೆ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.


Share

You cannot copy content of this page