ಮೈಸೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈರುತ್ಯ ರೈಲ್ವೆಯು ಮೈಸೂರು ಮತ್ತು ದರ್ಭಂಗಾ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ರೈಲುಗಳು ಪ್ರತಿ ದಿಕ್ಕಿನಲ್ಲಿಯೂ ತಲಾ ಐದು ಬಾರಿ ಸಂಚರಿಸಲಿವೆ.
ರೈಲು ಸಂಖ್ಯೆ 06211 ಮೈಸೂರು–ದರ್ಭಾಂಗಾ ವಿಶೇಷ ಎಕ್ಸ್’ಪ್ರೆಸ್ ರೈಲು, 27.10.2026 ರಿಂದ 24.11.2026 ರವರೆಗೆ ಪ್ರತಿ ಮಂಗಳವಾರ ಮೈಸೂರಿನಿಂದ 20:05 ಗಂಟೆಗೆ ಹೊರಟು, ಪ್ರತಿ ಶುಕ್ರವಾರ 11:30 ಗಂಟೆಗೆ ದರ್ಭಾಂಗಾ ತಲುಪಲಿದೆ.
ಮರು ಮಾರ್ಗದಲ್ಲಿ, ರೈಲು ಸಂಖ್ಯೆ 06212 ದರ್ಭಾಂಗಾ–ಮೈಸೂರು ವಿಶೇಷ ಎಕ್ಸ್’ಪ್ರೆಸ್ ರೈಲು, 31.10.2026 ರಿಂದ 28.11.2026 ರವರೆಗೆ ಪ್ರತಿ ಶನಿವಾರ ದರ್ಭಾಂಗಾದಿಂದ 07:05 ಗಂಟೆಗೆ ಹೊರಟು, ಪ್ರತಿ ಸೋಮವಾರ 19:10 ಗಂಟೆಗೆ ಮೈಸೂರಿಗೆ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ದಾವಣಗೆರೆ, ಎಸ್ಎಮ್ಎಮ್ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೊಂಡಾ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹಿಲ್ಯಾನಗರ, ಮನ್ಮಾಡ್, ಭುಸಾವಲ್, ಇಟಾರ್ಸಿ, ಪಿಪರಿಯಾ, ನರಸಿಂಹಪುರ, ಮದನ್ ಮಹಲ್, ಕಟ್ನಿ, ಮೈಹಾರ್, ಸತ್ನಾ, ಪ್ರಯಾಗ್ರಾಜ್ ಛಿಯೋಕಿ, ಮಿರ್ಜಾಪುರ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್, ಅರಾ, ದಾನಾಪುರ, ಪಟ್ನಾ ಜಂಕ್ಷನ್, ಬಕ್ತಿಯಾರ್ಪುರ, ಮೊಕಾಮಾ ಜಂಕ್ಷನ್, ಬರೌನಿ ಜಂಕ್ಷನ್ ಮತ್ತು ಸಮಸ್ತಿಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಈ ವಿಶೇಷ ರೈಲುಗಳು 1 ಎಸಿ ಫಸ್ಟ್ ಕ್ಲಾಸ್-ಕಮ್-ಎಸಿ 2-ಟೈರ್ ಬೋಗಿ, 1 ಎಸಿ 2-ಟೈರ್ ಬೋಗಿ, 2 ಎಸಿ 3-ಟೈರ್ ಬೋಗಿಗಳು, 10 ಸ್ಲೀಪರ್ ಕ್ಲಾಸ್ ಬೋಗಿಗಳು, 8 ಸಾಮಾನ್ಯ ದರ್ಜೆಯ ಬೋಗಿಗಳು ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್’ಮೆಂಟ್’ಗಳನ್ನು ಹೊಂದಿರುವ 2 ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಸೇರಿದಂತೆ ಒಟ್ಟು 24 ಬೋಗಿಗಳನ್ನು ಒಳಗೊಂಡಿರುತ್ತವೆ.
