ಸಮಗ್ರ ಸುದ್ದಿ

ರಾಜ್ಯಾದ್ಯಂತ ಅಕ್ಟೋಬರ್ 26ರಿಂದ ಜಾಗೃತಿ ಅರಿವು ಸಪ್ತಾಹ

Share

ಬೆಂಗಳೂರು:ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಅಕ್ಟೋಬರ್ 26 ರಿಂದ ನವೆಂಬರ್ 01ರವರೆಗೆ “ಜಾಗೃತಿ ಅರಿವು ಸಪ್ತಾಹ-2026″ನ್ನು ಆಚರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಆಸುಇ) ಸುತ್ತೋಲೆ ಹೊರಡಿಸಿದೆ. ಈ ವರ್ಷದ ಸಪ್ತಾಹವನ್ನು “ಸತ್ಯನಿಷ್ಠೆಯಿಂದ ಸಮೃದ್ಧಿ” (Vigilance: Probity for Prosperity) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಈ ಸಪ್ತಾಹದ ಅಂಗವಾಗಿ, ಅಕ್ಟೋಬರ್ 27ರಂದು ಪೂರ್ವಾಹ್ನ 11.00 ಗಂಟೆಗೆ ಬೆಂಗಳೂರಿನ ವಿಕಾಸ ಸೌಧದ ಕೊಠಡಿ ಸಂಖ್ಯೆ 318ರಲ್ಲಿ (3ನೇ ಮಹಡಿ) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವಾಲಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಚನವನ್ನು ಬೋಧಿಸಲಿದ್ದಾರೆ.

ಕೇಂದ್ರ ವಿಚಕ್ಷಣಾ ಆಯೋಗದ (CVC) ನಿರ್ದೇಶನದಂತೆ ರಾಜ್ಯ ಸರ್ಕಾರದ ಎಲ್ಲಾ ಆಡಳಿತ ವಿಭಾಗಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಈ ಸಪ್ತಾಹದಡಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಸಪ್ತಾಹ ಮುಕ್ತಾಯಗೊಂಡ ಒಂದು ವಾರದೊಳಗೆ ಸಂಬಂಧಪಟ್ಟ ಇಲಾಖೆಗಳು ಸಿಆಸುಇ (ಜಾಗೃತ ವಿಭಾಗ) ಗೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ.


Share

You cannot copy content of this page