ಸಮಗ್ರ ಸುದ್ದಿ

ಮೈಸೂರು ಮೃಗಾಲಯ: ವಿಜಯದಶಮಿ ದಿನದಂದು 19,745 ವೀಕ್ಷಕರಿಂದ ಭೇಟಿ, ರೂ. 25.15 ಲಕ್ಷ ಆದಾಯ ಸಂಗ್ರಹ

Share

ಮೈಸೂರು:ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 2026ರ ಅಕ್ಟೋಬರ್ 21ರಂದು ವಿಜಯದಶಮಿಯ ದಿನದಂದು ಒಟ್ಟು 19,745 ಮಂದಿ ವೀಕ್ಷಕರು ಭೇಟಿ ನೀಡಿದ್ದು, ಅಂದಿನ ದಿನ ಮೃಗಾಲಯಕ್ಕೆ ರೂ. 25,15,654/- ಗಳ ಗೇಟ್ ಆದಾಯ ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ. ಅನುಷ ಅವರು ತಿಳಿಸಿದ್ದಾರೆ.

ದಸರಾ ಹಬ್ಬದ 10 ದಿನಗಳ ಅವಧಿಯಲ್ಲಿ ಮತ್ತು ಆಯುಧ ಪೂಜೆ ಹಾಗೂ ವಿಜಯದಶಮಿ ದಿನಗಳಲ್ಲಿ ಮೃಗಾಲಯಕ್ಕೆ ಭೇಟಿ ನೀಡಿರುವ ವೀಕ್ಷಕರ ಸಂಖ್ಯೆ ಹಾಗೂ ಬಂದ ಆದಾಯದ ವಿವರಗಳು ಈ ಕೆಳಗಿನಂತಿವೆ.

2022ರ ದಸರಾ 10 ದಿನಗಳಲ್ಲಿ 1.55 ಲಕ್ಷ ವೀಕ್ಷಕರು (ರೂ. 153.51 ಲಕ್ಷ ಆದಾಯ). ಆಯುಧ ಪೂಜೆಯಂದು 22,909 ವೀಕ್ಷಕರಿಂದ ರೂ. 23.05 ಲಕ್ಷ ಹಾಗೂ ವಿಜಯದಶಮಿಯಂದು 36,013 ವೀಕ್ಷಕರಿಂದ ರೂ. 35.83 ಲಕ್ಷ ಆದಾಯ.

2023ರ ದಸರಾ 10 ದಿನಗಳಲ್ಲಿ 1.65 ಲಕ್ಷ ವೀಕ್ಷಕರು (ರೂ. 167.10 ಲಕ್ಷ ಆದಾಯ). ಆಯುಧ ಪೂಜೆಯಂದು 28,287 ವೀಕ್ಷಕರಿಂದ ರೂ. 28.23 ಲಕ್ಷ ಹಾಗೂ ವಿಜಯದಶಮಿಯಂದು 23,890 ವೀಕ್ಷಕರಿಂದ ರೂ. 24.58 ಲಕ್ಷ ಆದಾಯ.

2024ರ ದಸರಾ 10 ದಿನಗಳಲ್ಲಿ 1.65 ಲಕ್ಷ ವೀಕ್ಷಕರು (ರೂ. 171.29 ಲಕ್ಷ ಆದಾಯ). ಆಯುಧ ಪೂಜೆಯಂದು 21,996 ವೀಕ್ಷಕರಿಂದ ರೂ. 23.07 ಲಕ್ಷ ಹಾಗೂ ವಿಜಯದಶಮಿಯಂದು 34,659 ವೀಕ್ಷಕರಿಂದ ರೂ. 35.54 ಲಕ್ಷ ಆದಾಯ.

2025ರ ದಸರಾ 10 ದಿನಗಳಲ್ಲಿ 1.56 ಲಕ್ಷ ವೀಕ್ಷಕರು (ರೂ. 191.37 ಲಕ್ಷ ಆದಾಯ). ಆಯುಧ ಪೂಜೆಯಂದು 27,033 ವೀಕ್ಷಕರಿಂದ ರೂ. 33.21 ಲಕ್ಷ ಹಾಗೂ ವಿಜಯದಶಮಿಯಂದು 27,272 ವೀಕ್ಷಕರಿಂದ ರೂ. 34.07 ಲಕ್ಷ ಆದಾಯ.

2026ರ ದಸರಾ 10 ದಿನಗಳಲ್ಲಿ 1.57 ಲಕ್ಷ ವೀಕ್ಷಕರು (ರೂ. 193.19 ಲಕ್ಷ ಆದಾಯ). ಆಯುಧ ಪೂಜೆಯಂದು 20,264 ವೀಕ್ಷಕರಿಂದ ರೂ. 25.67 ಲಕ್ಷ ಹಾಗೂ ವಿಜಯದಶಮಿಯಂದು 19,745 ವೀಕ್ಷಕರಿಂದ ರೂ. 25.15 ಲಕ್ಷ ಆದಾಯ ದಾಖಲಾಗಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ಮೃಗಾಲಯದಲ್ಲಿ ಸ್ವಚ್ಛತೆ ಮತ್ತು ಶಾಂತಿ ನೆಲೆಸಲು ಸಂಪೂರ್ಣ ಸಹಕಾರ ನೀಡಿದ ಎಲ್ಲಾ ವೀಕ್ಷಕರಿಗೆ, ಪೊಲೀಸರಿಗೆ ಹಾಗೂ ಮೃಗಾಲಯದ ಸಿಬ್ಬಂದಿ ವರ್ಗದವರಿಗೆ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ. ಅನುಷ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.


Share

You cannot copy content of this page