ಸಮಗ್ರ ಸುದ್ದಿ

ನ.12ರಂದು ಡಾ. ಅಜಯ್ ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ 2ನೇ ಕ್ವಾಂಟಮ್ ಟಾಸ್ಕ್ ಫೋರ್ಸ್ ಸಭೆ

Share

ಬೆಂಗಳೂರು: ಕರ್ನಾಟಕದ ಕ್ವಾಂಟಮ್ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕ್ವಾಂಟಮ್ ಟಾಸ್ಕ್ ಫೋರ್ಸ್‌ನ ಎರಡನೇ ಸಭೆ ನವೆಂಬರ್ 12ರಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ರಾಜ್ಯದ Quantum City ಯೋಜನೆ, ಸಂಶೋಧನಾ ಮೂಲಸೌಕರ್ಯ, ಕೈಗಾರಿಕಾ ಸಹಭಾಗಿತ್ವ, ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ, ಪ್ರತಿಭೆ ಅಭಿವೃದ್ಧಿ, ಹೂಡಿಕೆ ಆಕರ್ಷಣೆ ಹಾಗೂ ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಕಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುವುದು.

“ಕರ್ನಾಟಕದಲ್ಲಿ ಕ್ವಾಂಟಮ್ ತಂತ್ರಜ್ಞಾನಕ್ಕೆ ಅಗತ್ಯವಾದ ಸಂಶೋಧನಾ ಸಂಸ್ಥೆಗಳು, ಪ್ರತಿಭೆ, startups ಮತ್ತು technology ecosystem ಈಗಾಗಲೇ ಬಲವಾಗಿದೆ. ಈ ಸಾಮರ್ಥ್ಯವನ್ನು ಸಮಗ್ರವಾಗಿ ಬಳಸಿಕೊಂಡು ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ,” ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

ಸಭೆಯಲ್ಲಿ Quantum Computing, Quantum Communication, Quantum Sensing ಹಾಗೂ Quantum Security ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಇರುವ ಅವಕಾಶಗಳು, ಸಂಶೋಧನೆಯಿಂದ ವಾಣಿಜ್ಯೀಕರಣದವರೆಗೆ ಅಗತ್ಯ ecosystem ನಿರ್ಮಾಣ ಹಾಗೂ ಉದ್ಯಮ–ಸಂಶೋಧನಾ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.

ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಪ್ರೊ. ಅರಿಂಧಮ್ ಘೋಷ್, ಟಾಸ್ಕ್ ಫೋರ್ಸ್ ಸದಸ್ಯರು, ಪ್ರಮುಖ ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು, ತಜ್ಞರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

“ನಮ್ಮ ಉದ್ದೇಶ ಕೇವಲ ಸಂಶೋಧನೆಯನ್ನು ಉತ್ತೇಜಿಸುವುದಲ್ಲ; ಸಂಶೋಧನೆ, ಉದ್ಯಮ, ಹೂಡಿಕೆ ಮತ್ತು ಪ್ರತಿಭೆಯನ್ನು ಒಂದೇ ecosystemನಲ್ಲಿ ಸಂಪರ್ಕಿಸಿ, ಕರ್ನಾಟಕದಲ್ಲಿ ವಿಶ್ವಮಟ್ಟದ Quantum innovation ecosystem ನಿರ್ಮಿಸುವುದು,” ಎಂದು ಸಚಿವರು ತಿಳಿಸಿದ್ದಾರೆ.


Share

You cannot copy content of this page