ಸಮಗ್ರ ಸುದ್ದಿ

ಹಾಸನಾಂಬ ದೇವಾಲಯಕ್ಕೆ ಇಂದಿಗೆ 22.36 ಕೋಟಿ ಆದಾಯ

Share

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ದಾಖಲೆಯ ಆದಾಯ ಸಂಗ್ರಹವಾಗಿದೆ.

2026ರ ಅಕ್ಟೋಬರ್ 29ರಿಂದ ನವೆಂಬರ್ 9ರ ಬೆಳಿಗ್ಗೆ 8 ಗಂಟೆಯವರೆಗೆ ಒಟ್ಟು 11 ದಿನಗಳಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಬರೋಬ್ಬರಿ 22,36,64,480 (22.36 ಕೋಟಿ) ಆದಾಯ ಸಂಗ್ರಹವಾಗಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ 1,000 ಮುಖಬೆಲೆಯ ವಿಶೇಷ ದರ್ಶನದ 1,47,025 ಟಿಕೆಟ್‌ಗಳು ಮಾರಾಟವಾಗಿದ್ದು, ಇದರಿಂದ 14,70,25,000 ಆದಾಯ ಬಂದಿದೆ. ಈ ಪೈಕಿ ಆನ್‌ಲೈನ್‌ನಲ್ಲಿ 33,948 ಹಾಗೂ ಟಿಕೆಟ್ ಕೌಂಟರ್‌ಗಳಲ್ಲಿ 1,13,077 ಟಿಕೆಟ್‌ಗಳು ಮಾರಾಟವಾಗಿವೆ.

ಅದೇ ರೀತಿ 300 ಮುಖಬೆಲೆಯ ವಿಶೇಷ ದರ್ಶನದ 2,15,911 ಟಿಕೆಟ್‌ಗಳು ಮಾರಾಟವಾಗಿದ್ದು, 6,47,73,300 ಸಂಗ್ರಹವಾಗಿದೆ. ಇದರಲ್ಲಿ ಆನ್‌ಲೈನ್ ಮೂಲಕ 35,678 ಹಾಗೂ ಕೌಂಟರ್‌ಗಳಲ್ಲಿ 1,80,233 ಟಿಕೆಟ್‌ಗಳು ಮಾರಾಟವಾಗಿವೆ.

ಇನ್ನು ಲಾಡು ಪ್ರಸಾದ ಮಾರಾಟದಿಂದಲೂ ಗಣನೀಯ ಆದಾಯ ಹರಿದುಬಂದಿದೆ. ಒಟ್ಟು 1,97,111 ಲಾಡು ಪ್ಯಾಕೆಟ್‌ಗಳು ಮಾರಾಟವಾಗಿದ್ದು, 1,18,66,180 ಆದಾಯ ಸಂಗ್ರಹವಾಗಿದೆ.

ಒಟ್ಟಾರೆ 11 ದಿನಗಳಲ್ಲಿ 22.36 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿರುವುದು ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವದ ವಿಶೇಷ ದಾಖಲೆಯಾಗಿದೆ. ಭಕ್ತರ ನಿರೀಕ್ಷೆಗೂ ಮೀರಿ ಹರಿದುಬಂದ ಜನಸಾಗರ ಹಾಗೂ ದರ್ಶನದ ಟಿಕೆಟ್‌ಗಳಿಗೆ ವ್ಯಕ್ತವಾದ ಬೇಡಿಕೆ ಈ ದಾಖಲೆಯ ಆದಾಯಕ್ಕೆ ಕಾರಣವಾಗಿದೆ.


Share

You cannot copy content of this page