ಬೆಂಗಳೂರು: ಮುಂದಿನ ಕೆಲವು ದಿನಗಳವರೆಗೆ ಮಂಜಿನ ಕಾರಣದಿಂದಾಗಿ ಕಡಿಮೆ ಗೋಚರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ವಿಮಾನ ನಿಲ್ದಾಣದ ಸಂಪರ್ಕ ಮಾರ್ಗಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ವಿಮಾನ ಪ್ರಯಾಣದ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ನಿರಾತಂಕವಾಗಿ ಪೂರ್ಣಗೊಳಿಸಲು, ಸಾಕಷ್ಟು ಮುಂಚಿತವಾಗಿ ಆಗಮಿಸಿ ಸುಗಮ ಮತ್ತು ತಡೆರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಬೇಕೆಂದು ಪ್ರಯಾಣಿಕರಲ್ಲಿ ವಿನಂತಿಸುತ್ತೇವೆ.
ಪ್ರಯಾಣಿಕರು ತಮ್ಮ ವಿಮಾನಯಾನದ ಮಾಹಿತಿಯನ್ನು ಪರಿಶೀಲಿಸಲು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-66785555/080-47406666 ಕ್ಕೆ ಸಂಪರ್ಕಿಸಬಹುದು.
