ಸಮಗ್ರ ಸುದ್ದಿ

ಬೆಂಗಳೂರು ಉತ್ತರ ನಗರ ಪಾಲಿಕೆ | ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ. ಗಳಿಗೆ ಬೀಗಮುದ್ರೆ

Share

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರ ಸೂಚನೆಯಂತೆ ನಗರ ಪಾಲಿಕೆಯ ಹಲವು ವಾರ್ಡ್‌ಗಳಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಿ.ಜಿ.ಗಳನ್ನು ಪರಿಶೀಲಿಸಲಾಗಿ, ಮಾರ್ಗಸೂಚಿಗಳನ್ನು ಅನುಸರಿಸದೇ ಇರುವ ಕಾರಣಕ್ಕೆ ವಾರ್ಡ್‌ ಸಂಖ್ಯೆ 01, ಯಲಹಂಕ ಕೋಗಿಲು ಕ್ರಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 02 ಪುರುಷರ ಪಿ.ಜಿ.ಗಳನ್ನು ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗಮುದ್ರೆ ಹಾಕಲಾಗಿದೆ.

ಪರಿಶೀಲನೆಯ ಮುಂದುವರಿದ ಭಾಗವಾಗಿ ಇಂದು ವಾರ್ಡ್‌ ಸಂಖ್ಯೆ:05 ಜಕ್ಕೂರಿನಲ್ಲಿ ಕೂಡ ಹೆವೆನ್ಲಿ ಕೋ ಲಿವಿಂಗ್ ಪಿ.ಜಿಯ ಅಡುಗೆ ಮನೆಯನ್ನು ಪರಿಶೀಲಿಸಲಾಗಿ, ಶುಚಿತ್ವ ಕಾಪಾಡಿಕೊಳ್ಳದೇ ಇರುವ ಕಾರಣಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅದನ್ನೂ ಬೀಗಮುದ್ರೆಗೊಳಿಸಲಾಗಿದೆ.

ಇನ್ನು ಮುಂದೆ ಮಾರ್ಗಸೂಚನೆಗಳನ್ನು ಅನುಸರಿಸದೇ ಇರುವ ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಪಿ.ಜಿ.ಗಳ ಮೇಲೆ ತೀವ್ರ ಕ್ರಮವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.


Share

You cannot copy content of this page