ಸಮಗ್ರ ಸುದ್ದಿ

ಮಾರ್ಚ್ 6 ರಿಂದ ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನ

Share


ಬೆಂಗಳೂರು:ಕರ್ನಾಟಕ ವಿಧಾನಮಂಡಲದ 16 ನೇ ವಿಧಾನಸಭೆಯ 9ನೇ ಅಧಿವೇಶನದ ಮುಂದುವರೆದ ಉಪವೇಶನವು 2026 ನೇ ಮಾರ್ಚ್ 6 ರಂದು ಬೆಳಿಗ್ಗೆ 10.15 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ.

2026 ನೇ ಮಾರ್ಚ್ 6 ರಂದು ಬೆಳಿಗ್ಗೆ 10.15 ಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು 2026-27 ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿರುವರು. ಮಾರ್ಚ್ 9, 10, 11, 16, 17 18, 23, 24, 25 ಮತ್ತು 27 ರಂದು ಸರ್ಕಾರಿ ಕಾರ್ಯಕಲಾಪಗಳು ನಡೆಯಲಿವೆ. ಮಾರ್ಚ್ 12 ಮತ್ತು 26 ರಂದು ಸರ್ಕಾರಿ / ಖಾಸಗಿ ಕಾರ್ಯಕಲಾಪಗಳು ನಡೆಯಲಿವೆ.

ಮಾರ್ಚ್ 7 ಮತ್ತು 20 ರಂದು ಕಾರ್ಯಕಲಾಪಗಳು ಇರುವುದಿಲ್ಲ. ಮಾರ್ಚ್ 8, 14, 15, 21 ಮತ್ತು 22 ಸಾರ್ವತ್ರಿಕ ರಜಾದಿನವಾಗಿರುತ್ತದೆ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page