ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1 ಮತ್ತು 2ರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 107 ಆಸ್ತಿಗಳಿಂದ ಬಾಕಿ ಇರುವ ರೂ. 2.49 ಕೋಟಿ ಗಳನ್ನು ವಸೂಲಿ ಮಾಡುವ ಸಲುವಾಗಿ ಇಂದು ಯಲಹಂಕ ಮಿನಿ ವಿಧಾನಸೌಧದಲ್ಲಿ ನಗರ ಪಾಲಿಕೆಯ ಅಪರ ಆಯುಕ್ತರು (ಕಂದಾಯ) ಹಾಗೂ ವಲಯ-1 ಮತ್ತು ವಲಯ-2ರ ಜಂಟಿ ಆಯುಕ್ತರುಗಳ ಹಾಗೂ ಉಪ ಆಯುಕ್ತರುಗಳ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಸಾಕಷ್ಟು ಅವಕಾಶಗಳಿದ್ದರೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಗಳ ಅನ್ವಯ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಯಿತು.
ಈ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 10ಕ್ಕಿಂತ ಹೆಚ್ಚು ಬಿಡ್ಡುದಾರರು ಭಾಗವಹಿಸಿದ್ದರು.
ಪ್ರಕ್ರಿಯೆಯಲ್ಲಿ 2 ಆಸ್ತಿಗಳನ್ನು ಹರಾಜು ಮೂಲಕ ಖರೀದಿ
ಹರಾಜು ಪ್ರಕ್ರಿಯೆಗಿಟ್ಟ ಆಸ್ತಿಗಳ ಪೈಕಿ ನಗರ ಪಾಲಿಕೆಯ ವಲಯ-2ರ ವ್ಯಾಪ್ತಿಯ 2 ಆಸ್ತಿಗಳನ್ನು ಕಮಲ ಕೋಂ ರಾಮಂಜಿನೇಯಲು ರವರು ಖರೀದಿ ಮಾಡಲು ಮುಂದಾಗಿ ಹರಾಜು ಕೂಗಿರುತ್ತಾರೆ.
ಮೆ. ಸ್ಟ್ಯಾಂಡರ್ಡ್ ಬ್ರಿಕ್ & ಟೈಲ್ ಸುಸ್ತಿದಾರರಿಗೆ ಸೇರಿದ ಸ್ವತ್ತಿನ ಸಂಖ್ಯೆ 1024/709/181/ 898/755/2/ಡಿ -0901, 9ನೇ ಮಹಡಿ ಆರ್.ಎಂ.ಜೆಡ್. ವಸತಿ ಸಮುಚ್ಛಯ, ಅಳ್ಳಾಳಸಂದ್ರ , ಬೆಂಗಳೂರು-64 ರ ಫ್ಲಾಟ್ ನಂ .ಡಿ.0901, SBA, 2087 ಚದುರ ಅಡಿಗಳನ್ನು ರೂ.84,60,000/- ಗಳಿಗೆ ಬಿಡ್ ಮಾಡುವ ಮೂಲಕ ಹಾಗೂ
ವೈ.ಕೆ. ಲಿಂಗಪ್ಪ ರವರಿಗೆ ಸೇರಿದ ದೇಶದಪೇಟೆ ರಸ್ತೆ, ಯಲಹಂಕ ಓಲ್ಡ್ ಟೌನ್ ನಲ್ಲಿರುವ 989 ಚದುರ ಅಡಿಯಿರುವ ಸ್ವತ್ತಿನ ಸಂಖ್ಯೆ: 125/242 ರಲ್ಲಿ ನಿರ್ಮಿಸಿರುವ 2069 ಚದುರ ಅಡಿ ವಸತಿ ಕಟ್ಟಡವನ್ನು ರೂ.6000000 ಗಳಿಗೆ ಬಿಡ್ ಮಾಡುವ ಮೂಲಕ ಸದರಿ ಸುಸ್ತಿದಾರರು ಕ್ರಮವಾಗಿ ರೂ. 117209/- ಗಳ ಹಾಗೂ ರೂ.153377/- ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು.
ಹರಾಜು ಕೂಗಿದ 2 ಆಸ್ತಿಗಳಲ್ಲಿ ಬಿಡ್ ದಾರರು ಮೆ. ಸ್ಟ್ಯಾಂಡರ್ಡ್ ಬ್ರಿಕ್ & ಟೈಲ್ ಸುಸ್ತಿದಾರರಿಗೆ ಸೇರಿದ ಸ್ವತ್ತಿಗೆ ಮಾತ್ರ ಡಿಡಿ ನೀಡಿ, ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಂದು ಸುಸ್ತಿದಾರರಾದ ವೈ. ಕೆ. ಲಿಂಗಪ್ಪ ರವರಿಗೆ ಸೇರಿದ ಸ್ವತ್ತಿಗೆ ಬಿಡ್ ದಾರರು ಡಿಡಿ ನೀಡದ ಕಾರಣ ಸದರಿ ಸ್ವತ್ತಿನ ಹರಾಜನ್ನು ರದ್ದುಪಡಿಸಿ, ಸದರಿ ಆಸ್ತಿಯನ್ನು ಪಾಲಿಕೆಯ ವಶದಲ್ಲಿರಿಸಿದೆ.
ಉಳಿದ ಆಸ್ತಿಗಳನ್ನು ಖರೀದಿ ಮಾಡಲು ಬಿಡ್ ದಾರರು ಮುಂದೆ ಬರದ ಕಾರಣ ಅವುಗಳನ್ನು ನಗರ ಪಾಲಿಕೆಯ ವಶದಲ್ಲಿರಿಸಿ, ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು.
