ಸಮಗ್ರ ಸುದ್ದಿ

ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ| ಸಹಾಯವಾಣಿ ಆರಂಭಿಸಿದ ರಾಜ್ಯ ಸರ್ಕಾರ

Share

ಬೆಂಗಳೂರು: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಅಲ್ಲದೇ, ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಹೊಂದುವ ವಿಮಾನ ಯಾನಗಳನ್ನು ದೀಡೀರ್ ರದ್ದುಗೊಳಿಸುವುದರಿಂದ ದುಬೈ, ಕತಾರ್, ಕುವೈತ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಸಂಕಷ್ಟ ಉಂಟಾಗಿದೆ.

ಈ ನಡುವೆ ಕರ್ನಾಟಕದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ್ದ ಬಳ್ಳಾರಿಯ ಶಾಸಕ ನಾ.ರಾ. ಭರತ್ ರೆಡ್ಡಿ ಸೇರಿದಂತೆ ಹಲವು ಮಂದಿ ಕನ್ನಡಿಗರು ಸಿಕ್ಕಿಬಿದ್ದಿದ್ದಾರೆ.
ಯುದ್ಧ ಬಾಧಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕೂಡಲೇ ರಕ್ಷಿಸುವಂತೆ ಮಾಜಿ ಸಚಿವ ನಾಗೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ತಾವು ದೆಹಲಿಯ ಅನಿವಾಸಿ ಆಯುಕ್ತರು ಹಾಗೂ ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಅವರ ಸೂಚನೆಯಂತೆ ರಾಜ್ಯ ಸರ್ಕಾರವು ಸಹಾಯವಾಣಿಯನ್ನು ಆರಂಭಿಸಿದೆ. ಯುದ್ಧಬಾಧಿತ ದೇಶಗಳಲ್ಲಿ ನೆಲೆಸಿರುವವರ ಕುಟುಂಬಸ್ಥರು ಈಸಹಾಯವಾಣಿಯ ನೆರವು ಪಡೆಯಬೇಕೆಂದು ಕೋರಲಾಗಿದೆ.

ಇಸ್ರೇಲ್, ಇರಾನ್, ಸೌದಿ ಅರೇಬಿಯಾ ಹಾಗೂ ಯುಎಇಗಳಿಗೆ ಪ್ರತ್ಯೇಕ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.


Share

You cannot copy content of this page