ಸಮಗ್ರ ಸುದ್ದಿ

ಇರಾನ್ ಸರ್ವೋಚ್ಛ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ| ಇರಾನ್ ಸರ್ಕಾರ 40 ದಿನಗಳ ಶೋಕಾಚರಣೆ ಘೋಷಣೆ

Share

ಬೆಂಗಳೂರು: ಇರಾನ್ ಸರ್ವೋಚ್ಛ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಇರಾನ್ ಸರ್ಕಾರ ಆಯಾತೊಲ್ಲಾ ಅಲಿ ಖಮೇನಿಯ ಸಾವನ್ನು ದೃಢಪಡಿಸಿದ್ದು, ದೇಶಾದ್ಯಂತ ತುರ್ತು ಪರಿಸ್ಥಿತಿ ಸಹಿತ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ನಿನ್ನೆಯಿಂದ ಇರಾನ್ ನ ರಾಜಧಾನಿ ಟೆಹರಾನ್ ಸೇರಿದಂತೆ ಇರಾನ್ ನ ಬಹುತೇಕ ಎಲ್ಲ ನಗರಗಳ ಮೇಲೆ ಅಮೆರಿಕ- ಇಸ್ರೇಲ್ ಸೇನಾಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಕ್ಷಿಪಣಿ ದಾಳಿ ನಡೆಸಿದ್ದವು.

ಈ ಸಂದರ್ಭದಲ್ಲಿ ಆಯಾತುಲ್ಲಾ ಅಲಿ ಖಮೇನಿ ಸೇರಿದಂತೆ ಇರಾನ್ ರಕ್ಷಣಾ ಸಚಿವ ಅಮೀರ್ ನಾಸೀರ್ ಜಾದೇ, ಐಆರ್ ಜಿಸಿ ಕಮಾಂಡರ್, ಮೊಹಮ್ಮದ್ ಫಕ್ಪೂರ್, ಖಮೇನಿ ಅವರ ಮಗಳು, ಅಳಿಯ ಹಾಗೂ ಮೊಮ್ಮಗ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಆಯಾತುಲ್ಲಾ ಅಲಿ ಖಮೇನಿ ಅಡಗಿದ್ಧ ರಹಸ್ಯ ಬಂಕರ್ ಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಬಂಕರ್ ಬ್ಲಾಸ್ಟ್ ಮೂಲಕ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಆಯಾತುಲ್ಲಾ ಅಲಿ ಖಮೇನಿ ಹಾಗೂ ಇತರೆ 7 ಮಂದಿ ಅಧಿಕಾರಿಗಳು ಮೃತಪಟ್ಟಿದ್ದಾರೆ.

ಇರಾನ್ ನ ಅಧ್ಯಕ್ಷರ ಅರಮನೆಯ ಸಮೀಪವೇ ಇರುವ ಬಂಕರ್ ನ ಸನಿಹದಲ್ಲೇ ಖಮೇನಿ ಅವರ ಪಾರ್ಥಿವ ಶರೀರ ಪತ್ತೆಯಾಗಿದೆ. ಪಾರ್ಥಿವ ಶರೀರವನ್ನು ಇರಾನ್ ನ ಸೇನಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಏಳು ದಿನಗಳ ಕಾಲ ಟೆಹರಾನ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದೆ.

ಈ ವೇಳೆ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ ನಲ್ಲಿ ಖಮೇನಿಯ ಹತ್ಯೆಯನ್ನು ಘೋಷಿಸಿದ್ದರು. ಇರಾನ್ ನ ಸರ್ವೋಚ್ಛ ನಾಯಕನ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ರೆವಲ್ಯೂಷನರಿ ಗಾರ್ಡ್ಸ್ ಸೇರಿದಂತೆ ಇರಾನ್ ಸೇನೆ ಹಾಗೂ ಎಲ್ಲ ಬಗೆಯ ಭದ್ರತಾ ಅಧಿಕಾರಿಗಳು ಯುದ್ಧ ಮುಂದುವರೆಸಲು ಇಚ್ಚಿಸದೇ ಶರಣಾಗಲು ಬಯಸಿದ್ದಾರೆ ಎಂದು ಸಹ ಟ್ರಂಪ್ ತಿಳಿಸಿದ್ದಾರೆ.


Share

You cannot copy content of this page