ಸಮಗ್ರ ಸುದ್ದಿ

ಕೋವಿಡ್ ನಿಂದಾಗಿ ನಿಧನರಾಗಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ ಕುಟುಂಬ ವರ್ಗದವರಿಗೆ ₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ

Share

ಕಲಬುರಗಿ: ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ ( ಬಿ) ಗ್ರಾಮ ಪಂಚಾಯತಿಯ ಪಂಪ್ ಆಪರೇಟರ್ ಈರಣ್ಣ ತಂದೆ ಶರಣಪ್ಪ ದಂಡೋತಿ ಅವರ ಕುಟುಂಬದವರಿಗೆ ರೂ. 30 ಲಕ್ಷ ಮೊತ್ತದ ಪರಿಹಾರದ ಚೆಕ್‌ನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಿತರಿಸಿದರು.

ಕೋವಿಡ್-19‌ ಸಾಂಕ್ರಾಮಿಕ ರೋಗ ತಗುಲಿದ್ದ ಈರಣ್ಣನನ್ನು 2021 ರ ಮೇ 10 ರಂದು ಕಲಬುರಗಿ ಜಿಮ್ಸ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಇದರ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿ ಜಿಲ್ಲಾ ಆಸ್ಪತ್ರೆ ಕಲಬುರಗಿ ರವರು ಕೋವಿಡ್‌-19 ರಿಂದ ಮರಣ ಹೊಂದಿದ ಬಗ್ಗೆ ಧೃಢೀಕರಣ ನೀಡಿರುವ ಹಿನ್ನೆಲೆ, ಕಲಬುರಗಿ ಜಿಲ್ಲಾ ಪಂಚಾಯತ್ ಆಶ್ವಾಸನೆ ನಿಧಿಯಿಂದ ರೂ.30.00 ಲಕ್ಷಗಳ ಪರಿಹಾರದ ಮೊತ್ತದ ಚೆಕ್‌ನ್ನು ವಿತರಿಸಿದ ಸಚಿವರ ಕಷ್ಟಕಾಲದಲ್ಲಿ ಕುಟುಂಬದ ನೆರವಿಗೆ ಧಾವಿಸಿದ್ದಾರೆ.

ಮೃತರ ಧರ್ಮಪತ್ನಿಯಾದ ಶ್ರೀಮತಿ ಶಾಂತಾಬಾಯಿ ಗಂಡ ದಿ.ಈರಣ್ಣ ದಂಡೋತಿ ಸಚಿವರಿಂದ‌ ಚೆಕ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ ಹರವಾಳ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್‌ ಮೀನಾ ಉಪಸ್ಥಿತರಿದ್ದರು.


Share

You cannot copy content of this page