ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ 2,027 ಕಡೆ ಕಾರ್ಯಾಚರಣೆಗಳನ್ನು ನಡೆಸಿದ್ದು, ಅದಲ್ಲಿ 1,609 ಉಲ್ಲಂಘನೆ ಪ್ರಕರಣಗಳಿಂದ 7,47,600 ದಂಡ ಸಂಗ್ರಹಿಸಲಾದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದರು.
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ(DLCC) ಸಭೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ(NTCP) ಮಂಡಿಸಿದ ಅಂಕಿ-ಅಂಶಗಳ ಪ್ರಕಾರ ತಂಬಾಕು ಬಳಕೆ ಮತ್ತು ಪರೋಕ್ಷ ಧೂಮಪಾನದಿಂದ ಉಂಟಾಗುತ್ತಿರುವ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಬೆಳಕಿಗೆ ತಂದಿವೆ.
ಗ್ಲೋಬಲ್ ಅಡಲ್ಟ್ ಟೊಬಾಕೊ ಸರ್ವೆ(GATS–II) ಪ್ರಕಾರ, ಸುಮಾರು ಶೇ.25.7% ರಷ್ಟು ಧೂಮಪಾನ ಮಡದಂತಹವರು ಹೊಗೆ ಸೇವಿಸುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್, ಕ್ಯಾನ್ಸರ್ ಹಾಗೂ ಶ್ವಾಸಕೋಶ ಸಂಬಂಧಿ ತೊಂದರೆಗಳ ಅಪಾಯ ಹೆಚ್ಚುತ್ತಿದೆ. ದೀರ್ಘಕಾಲ ಧೂಮಪಾನ ಮಾಡುವವರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ, ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಪ್ಟಾ), 2003ರ ಪರಿಣಾಮಕಾರಿ ಜಾರಿಗೆ ಹಾಗೂ ತಂಬಾಕು ಬಳಕೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಎಲ್ಲಾ 27 ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರ ನಿರ್ದೇಶನದ ಮೇರೆಗೆ ನಡೆಸಲಾಗಿದೆ.
ಜಾರಿ ಕಾರ್ಯಾಚರಣೆಯ ಪ್ರಮುಖ ಅಂಶಗಳು:
ಫೆಬ್ರವರಿ 18 ರಿಂದ ಎಲ್ಲಾ ಕ್ಷೇತ್ರಗಳಲ್ಲಿ ಸಮನ್ವಯದೊಂದಿಗೆ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಕೆಳಗಿನ ವಿಷಯಗಳಿಗೆ ವಿಶೇಷ ಗಮನ ನೀಡಲಾಗಿತ್ತು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ(COPTA ಕಲಂ 4), ಮಾರಾಟ ಕೇಂದ್ರಗಳ (POS) ಸುತ್ತಮುತ್ತ ಧೂಮಪಾನ ಮಾಡುವುದು. ಹೋಟೆಲ್‌ಗಳು, ಉಪಾಹಾರ ಮಂದಿರಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯಮ ಪಾಲಿಸುವುದು. ಬಿಡಿ ಬಿಡಿಯಾಗಿ ಸಿಗರೇಟುಗಳ ಮಾರಾಟಕ್ಕೆ ನಿಷೇಧ ಹಾಗೂ ಇ-ಸಿಗರೇಟುಗಳ ಮಾರಾಟಕ್ಕೆ ನಿಷೇಧ(ಭಾರತದಲ್ಲಿ ಕಾನೂನುಬಾಹಿರ) ಮಾಡಲಾಗಿದೆ.
ಫೆಬ್ರವರಿ 18 ರಿಂದ ಫೆಬ್ರವರಿ 26 ರವರೆಗೆ ಒಟ್ಟು 2027 ಕಾರ್ಯಾಚರಣೆಗಳನ್ನು ನಡೆಸಿದ್ದು, 1609 ಪ್ರಕರಣಗಳು
ದಾಖಲಾಗಿವೆ. ರೂ. 7,47,600 ದಂಡ ಮೊತ್ತ
ಸಂಗ್ರಹಿಸಲಾಗಿದೆ.
ಕಾರ್ಯಾಚರಣೆಯ ಪ್ರಮುಖ ವಿವರಗಳು:
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 409 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 2,10,000 ದಂಡ ಸಂಗ್ರಹಿಸುವ ಮೂಲಕ ಅತ್ಯಧಿಕ ದಂಡ ವಸೂಲಿ ಮಾಡಲಾಗಿದೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 103 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 1,00,500 ದಂಡ ವಸೂಲಿ ಮಾಡಲಾಗಿದೆ.
ಪ್ರಮುಖ ಉಲ್ಲಂಘನೆಗ ಕಾಯ್ದೆಗಳು:
ಕಲಂ 4 – ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು. ಕಲಂ 6(b) – ಅಪ್ರಾಪ್ತರು ಹಾಗೂ ಶಿಕ್ಷಣ ಸಂಸ್ಥೆಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು.
ಈ ತೀವ್ರ ಕಾರ್ಯಾಚರಣೆಯ ಮೂಲಕ ತಂಬಾಕು ನಿಯಂತ್ರಣ ಕಾಯ್ದೆಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಹಾಗೂ ಧೂಮಪಾನರಹಿತ ಮತ್ತು ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸಲು ಆಡಳಿತದ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಇಂತಹ ಜಾರಿ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು.
