ಸಮಗ್ರ ಸುದ್ದಿ

ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ| ಮಹಿಳಾ ಸಿಬ್ಬಂದಿಗಳಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ನಿರ್ವಹಣೆ

Share

ಬೆಂಗಳೂರು: ಬೆಂಗಳೂರು ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಡಾ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್- ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ಅನ್ನು ಬೆಂಗಳೂರು ಮತ್ತು ಮೈಸೂರು ನಡುವೆ ಮಹಿಳಾ ಸಿಬ್ಬಂದಿಗಳೇ ನಿರ್ವಹಿಸಿದರು.

ಶ್ರೀಮತಿ ಬಲ್ಲ ಶಿವಪಾರ್ವತಿ ಲೋಕೋ ಪೈಲಟ್ , ಶ್ರೀಮತಿ ಅಶ್ವತ್ಥಿ ಎಸ್. ನಾಯರ್ ಸಹಾಯಕ ಲೋಕೋ ಪೈಲಟ್ ಹಾಗೂ ಶ್ರೀಮತಿ ಪ್ರಿಯದರ್ಶಿನಿಯವರು ರೈಲು ವ್ಯವಸ್ಥಾಪಕಿ (ಗಾರ್ಡ್) ಆಗಿ ಕಾರ್ಯ ನಿರ್ವಹಿಸಿದರು.

ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕಿ ಪ್ರಿಯಾ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಶ್ರೀಮತಿ ಉಮಾ ಶರ್ಮಾ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ನಿವೇದಿತಾ ಬಾಲರಡ್ಡಿಯವರ್, ಮತ್ತು ವಿಭಾಗೀಯ ವಿದ್ಯುತ್ ಇಂಜಿನಿಯರ್ (ಟ್ರ್ಯಾಕ್ಷನ್ ಪರಿಚಾಲನೆ) ಅಖಿಲ್ ಮಟ್ಟುರವರು ಈ ರೈಲಿಗೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಗಳು ಮತ್ತು ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ನೀಡಿ ಶುಭಾಶಯ ಕೋರಿದರು.


Share

You cannot copy content of this page