ಸಮಗ್ರ ಸುದ್ದಿ

ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್ / ಬ್ಯಾನರ್ ತೆರವು ಕಾರ್ಯಾಚರಣೆ: ರಾಜೇಂದ್ರ ಚೋಳನ್

Share

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್/ ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರ ಸೂಚನೆ ನೀಡಿದ್ದು, ಅದರಂತೆ ಇಂದು ಬೆಳಿಗ್ಗೆಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅನಧಿಕೃತ ಫ್ಲೆಕ್ಸ್ / ಬ್ಯಾನರ್ ತೆರವುಗೊಳಿಸಿದರು.

ಅನಧಿಕೃತವಾಗಿ ಫ್ಲೆಕ್ಸ್ / ಬ್ಯಾನರ್ ಅಳವಡಿಸುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.
ರಸ್ತೆಯಲ್ಲಿ ಅಡ್ಡಲಾಗಿ ಹಾಕುವುದರಿಂದ, ಮರಗಳಿಗೆ ಹಾಗೂ ಕಂಬಗಳಿಗೆ ಫ್ಲೆಕ್ಸ್ / ಬ್ಯಾನರ್ ಹಾಕುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗುವುದರ ಜೊತೆಗೆ ಜೋರಾದ ಮಳೆ, ಗಾಳಿ ಬಂದ ಸಂದರ್ಭದಲ್ಲಿ ಬಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಲಿದ್ದು, ಕೂಡಲೇ ತೆರವುಗೊಳಿಸಲು ಆಯುಕ್ತರು ಸೂಚನೆ ನೀಡಿದ್ದರು.

ಫ್ಲೆಕ್ಸ್ / ಬ್ಯಾನರ್ ತೆರವು ಕಾರ್ಯದಲ್ಲಿ ಆಯಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು, ಸ್ವಚ್ಛತಾ ಸಿಬ್ಬಂದಿಗಳು, ಪಾಲ್ಗೊಂಡಿದ್ದರು.


Share

You cannot copy content of this page