ಇಂದು ವಿಶ್ವ ಜಲ ದಿನ. ನೀರು ಹರಿಯುವ ಸ್ಥಳದಲ್ಲಿ ಸಮಾನತೆ ಬೆಳೆಯುತ್ತದೆ ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ. ವಿಶ್ವ ಜಲದಿನದ ಸಂದರ್ಭದಲ್ಲಿ ವಿವಿಧೆಡೆ ನೀರಿನ ಸಂರಕ್ಷಣೆ ಕುರಿತ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ನೀಡಿ, ನೀರು ಕೇವಲ ಒಂದು ಸಂಪನ್ಮೂಲವಲ್ಲ, ಬದಲಿಗೆ ಅದು ಜೀವನ, ಜೀವನೋಪಾಯ ಮತ್ತು ನಮ್ಮೆಲ್ಲರ ಭವಿಷ್ಯದ ಅಡಿಪಾಯ. ಇಂದು ಉಳಿಸುವ ಪ್ರತಿಯೊಂದು ಹನಿ ನೀರು ಪರಿಸರವನ್ನು ಬಲಪಡಿಸುತ್ತದೆ ಮತ್ತು ಮುಂದಿನ ಪೀಳಿಗೆಗೆ ನೀರಿನ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಜೀವಸಂಕುಲದ ಅಸ್ತಿತ್ವಕ್ಕೆ ನೀರು ಅತ್ಯಮೂಲ್ಯವಾಗಿದ್ದು, ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಎಲ್ಲರೂ ಜಲಮೂಲಗಳನ್ನು ಸಂರಕ್ಷಿಸಬೇಕಿದೆ. ಶುದ್ಧ ನೀರನ್ನು ಮಿತವಾಗಿ ಬಳಸುವುದು ಸುಸ್ಥಿರ ಭವಿಷ್ಯಕ್ಕೆ ಅನಿವಾರ್ಯವಾಗಿದೆ. ಮುಂದಿನ ಪೀಳಿಗೆಗಾಗಿ ನೀರನ್ನು ಉಳಿಸುವ ಪ್ರತಿಜ್ಞೆಯನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
