ಸಮಗ್ರ ಸುದ್ದಿ

ವಿಶೇಷ ಅಭಿವೃದ್ಧಿ ಯೋಜನೆ & ಮುಖ್ಯಮಂತ್ರಿಗಳ ಮೂಲಸೌಕರ್ಯ ಕಲ್ಪಿಸುವ ಯೋಜನೆಗಳ ಕಾಮಗಾರಿ ತುರ್ತಾಗಿ ಕೈಗೊಳ್ಳಿ: ದಲ್ಜಿತ್ ಕುಮಾರ್

Share

ಬೆಂಗಳೂರು:ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ದಲ್ಜಿತ್ ಕುಮಾರ್ ರವರು* ಇಂದು ಇಂಜಿನಿಯರಿಂಗ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಮಾತನಾಡಿದ ಅವರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರವಾರು ವಿಶೇಷ ಅಭಿವೃದ್ಧಿ ಯೋಜನೆ & ಮುಖ್ಯಮಂತ್ರಿಗಳ ಮೂಲಸೌಕರ್ಯ ಕಲ್ಪಿಸುವ ಯೋಜನೆ ಅಡಿ ಚರಂಡಿ ಹೂಳು ತೆಗೆಯುವುದು ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ, ಪಾದಚಾರಿ ಮಾರ್ಗ ಅಭಿವೃದ್ಧಿ, ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆದಷ್ಟು ಬೇಗ ಕೈಗೆತ್ತಿಕೊಳ್ಳಲು ಹಾಗೂ ಈಗಾಗಲೇ ಪ್ರಾರಂಭ ಮಾಡಿರುವ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಮಳೆಗಾಲ ಪ್ರಾರಂಭ ಆಗುವುದರಿಂದ ರಸ್ತೆ ಎರಡೂ ಬದಿಯ ಚರಂಡಿಗಳಲ್ಲಿನ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಆಗುವಂತೆ ಹೂಳನ್ನು ತೆಗೆದು, ಚರಂಡಿಗಳನ್ನು ಪುನರ್ ಅಭಿವೃದ್ಧಿ ಪಡಿಸಲು ಸೂಚನೆ ನೀಡಿದರು. ಪಾದಚಾರಿ ಮಾರ್ಗದ ಸ್ಲ್ಯಾಬ್ ಗಳು ಹಾಳಾಗಿದ್ದಲ್ಲಿ ಅವುಗಳನ್ನು ದುರಸ್ಥಿಪಡಿಸಲು ಸೂಚಿಸಿದರು.

ರಸ್ತೆ ಗುಂಡಿ ಮುಚ್ಚಲು ಸೂಚನೆ

ಮುಖ್ಯ ರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿನ ರಸ್ತೆ (ಆರ್ಟಿರಿಯಲ್ & ಸಬ್ ಆರ್ಟಿರಿಯಲ್ ರಸ್ತೆ) ಗುಂಡಿಗಳನ್ನು ಗುರುತಿಸಿ ಅವುಗಳನ್ನು ಜರೂರಾಗಿ ಮುಚ್ಚಿ ಸಾರ್ವಜನಿಕ ಸಂಚಾರಕ್ಕೆ ಗುಣಮಟ್ಟದ ರಸ್ತೆಯನ್ನಾಗಿ ಪರಿವರ್ತನೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಲು ನಿರ್ದೇಶನಾ ನೀಡಿದರು.

ಈ ವೇಳೆ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರಾದ ಪುನೀತ್, ಚಂದ್ರಶೇಖರ, ಕಾರ್ಯಪಾಲಕ ಅಭಿಯಂತರರು, ಹಾಜರಿದ್ದರು.


Share

You cannot copy content of this page