ಕೃಷಿ

ಮಾರ್ಚ್ 28 ರಂದು ಜಿಕೆವಿಕೆ ಆವರಣದಲ್ಲಿ “ರೈತ ಸಂತೆ”

Share

ಬೆಂಗಳೂರು:ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಸುವ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ “ರೈತ ಸಂತೆ” ಎಲ್ಲಾ ಜನ ಸಮೂಹದ ಆಕರ್ಷಣೆಗೆ ಒಳಗಾಗಿದ್ದು ಈ ಬಾರಿ ರೈತ ಸಂತೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಹಲವಾರು ವಿನೂತನ ವಿಷಯಗಳಿಗೆ ಸಾಕ್ಷಿಯಾಗಿದೆ.

ಇದರ ಸಲುವಾಗಿ ಮಾರ್ಚ್ 28 ಬೆಳಿಗ್ಗೆ 7.00 ರಿಂದ 4.00 ಗಂಟೆಯವರಿಗೆ ಜಿ.ಕೆ.ವಿಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಉತ್ಪನ್ನಗಳ “ರೈತ ಸಂತೆ”ಯನ್ನು ಆಯೋಜಿಸಲು ಉದ್ದೇಶಿಸಿದೆ.

ಈ ಭಾರಿಯ ರೈತರ ಸಂತೆಯ ವಿಶೇಷತೆಗಳು – ತಾಜಾ ಹಲಸು, ದ್ರಾಕ್ಷಿ, ಕಲ್ಲಂಗಡಿ, ಕರಬೂಜ ಹಣ್ಣು, ಮೌಲ್ಯವರ್ಧಿತ ಸಿರಿಧಾನ್ಯ ಪದಾರ್ಥಗಳು ಹಾಗೂ ಸಾವಯವ ಉತ್ಪನ್ನಗಳು, ಗುಣಮಟ್ಟದ ರಾಜಮುಡಿ ಅಕ್ಕಿ, ತಾಜಾ ಅಣಬೆ, ಅಲಂಕಾರಿಕ ಮೀನು ಮರಿಗಳು ಮತ್ತು ತಾಜಾ ಹಣ್ಣು ಹಾಗೂ ತರಕಾರಿಗಳು ಇತ್ಯಾದಿ ವಿಶೇಷತೆಗಳಾಗಿವೆ.

ಇದರ ಜೊತೆಗೆ ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ, ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ – ಉತ್ಪನ್ನಗಳು,  ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು, ಪಶು ಸಂಗೋಪನೆ, ಕೃಷಿ ಪ್ರಕಟಣೆಗಳು, ವಿಶ್ವವಿದ್ಯಾನಿಲಯದ ಬಗ್ಗೆ ಮಾಹಿತಿ, ಇನ್ನು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿರುತ್ತದೆ.

ಸಾರ್ವಜನಿಕರು ಮತ್ತು ರೈತರು ಈ ವಿನೂತನ ಸಂತೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.


Share

You cannot copy content of this page