ಸಮಗ್ರ ಸುದ್ದಿ

ದಾವಣಗೆರೆ ದಕ್ಷಿಣ ಉಪ ಚುನಾವಣೆ: 11 ಅಭ್ಯರ್ಥಿಗಳ ನಾಮಪತ್ರ ವಾಪಸ್ :ಅಂತಿಮ ಕಣದಲ್ಲಿ 25 ಉಮೇದುವಾರರು

Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದ 39 ಜನರ ಪೈಕಿ 11 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ಅಂತಿಮ ಕಣದಲ್ಲಿ 25 ಮಂದಿ ಉಳಿದಿದ್ದಾರೆ.

ಆನಂದಪ್ಪ, ಸುಭಾನ್ ಖಾನ್, ಹೆಚ್. ಪರವೇಜ್, ಅಲ್ಲಾಭಕ್ಷ , ಅಮಿರಾ ಅಹಮ್ಮದ್ ಖಾನ್, ಇಸ್ಮಾಯಿಲ್ ಜಬೀವುಲ್ಲಾ, ಎಸ್.ಕೆ. ಅಫೈಲ್ ಖಾನ್, ಎಸ್.ಸಿ.ತ್ರಿಮೂರ್ತಿ, ಮಹಮ್ಮದ್ ಜಬೀವುಲ್ಲಾ, ಸೈಯದ್ ಜಬೀವುಲ್ಲಾ ಮತ್ತು ಡಿ. ಹನುಮಂತಪ್ಪ ಅವರುಗಳು ನಾಮ ಪತ್ರ ವಾಪಸ್ಸು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಒಟ್ಟಾರೆ 39 ಅಭ್ಯರ್ಥಿಗಳು 45 ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ವೇಳೆ 3 ಜನರ ನಾಮಪತ್ರಗಳು ಅಸಿಂಧುಗೊಂಡಿದ್ದು, ಇದೀಗ 11 ಜನ ವಾಪಸ್ಸು ಪಡೆದಿದ್ದಾರೆ. ಇದರೊಂದಿಗೆ ಅಂತಿಮ ಕಣದಲ್ಲಿ 25 ಮಂದಿ ಉಳಿದಿದ್ದಾರೆ.


Share

You cannot copy content of this page