ಸಮಗ್ರ ಸುದ್ದಿ

ಹಿಂದಿ ಅಂಕಗಳಿಕೆ ಹೊರತಾಗಿಸುವ ತೀರ್ಮಾನ ಐತಿಹಾಸಿಕ- ಬಿಳಿಮಲೆ ಸ್ವಾಗತಾರ್ಹ

Share

ಬೆಂಗಳೂರು: ಹಿಂದಿ ಪರೀಕ್ಷೆಯ ಅಂಕಗಳನ್ನು ಒಟ್ಟು ಅಂಕಗಳಿಕೆಗೆ ಪರಿಗಣಿಸದಂತೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಸ್ವಾಗತಿಸಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ರಾಜ್ಯ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾದ ದ್ವಿಭಾಷಾ ನೀತಿಗೆ ಈ ತೀರ್ಮಾನ ಪೂರಕವಾಗಿದ್ದು, ವಿದ್ಯಾರ್ಥಿಗಳ ಮೇಲೆ ಅನಗತ್ಯ ಭಾಷಾ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದರು.

ಕನ್ನಡದ ಹಿತದೃಷ್ಠಿಯಿಂದ ಈ ನಿರ್ಧಾರವು ಅತ್ಯಂತ ಮಹತ್ವದಾಗಿದ್ದು, ರಾಜ್ಯದ ಭಾಷಾ ಸ್ವಾಭಿಮಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದಿರುವ ಬಿಳಿಮಲೆ, ಕನ್ನಡ ಪರವಾದ ಇಂತಹ ನೀತಿಗಳನ್ನು ಸರ್ಕಾರವು ಮುಂದುವರೆಸಬೇಕು. ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕನ್ನಡ ಸ್ನೇಹಿಯಾಗಿ ರೂಪಿಸುವ ದಿಕ್ಕಿನಲ್ಲಿ ಈ ತೀರ್ಮಾನ ಪರಿಣಾಮಕಾರಿಯಾದ ಹೆಜ್ಜೆಯಾಗಿದ್ದು, ಕನ್ನಡದ ಅಭಿವೃದ್ಧಿಗೆ ಇದು ಹೊಸ ಚೈತನ್ಯವನ್ನು ತುಂಬಲಿದೆ ಎಂದು ಬಿಳಿಮಲೆ ಅಭಿಪ್ರಾಯಿಸಿದ್ದಾರೆ.


Share

You cannot copy content of this page