ಬೆಂಗಳೂರು: ಕ್ರಿಕೆಟ್ ಪ್ರಿಯರಿಗೆ ತೀವ್ರ ಕುತೂಹಲ ಮೂಡಿಸಿರುವ ಭಾರತೀಯ ಪ್ರೀಮಿಯರ್ ಲೀಗ್ -ಐಪಿಎಲ್ ಕ್ರಿಕೆಟ್‌ನ 19ನೇ ಆವೃತ್ತಿಯ ಪಂದ್ಯ ಇಂದು ಸಂಜೆ ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ, ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ‘ ನಾಯಕ ರಜತ್ ಪಟಿದಾರ್ ನೇತೃತ್ವದಲ್ಲಿ ತಮ್ಮ ತವರು ನೆಲದಲ್ಲೇ ಮೊದಲ ಪಂದ್ಯ ಆರಂಭಿಸಲಿದೆ.
ಐಪಿಎಲ್ ಪಂದ್ಯಾವಳಿ ಎರಡು ತಿಂಗಳ ಕಾಲ ಅಂದರೆ ಮೇ 31 ರವರೆಗೆ ನಡೆಯಲಿದೆ.
ಆರ್ ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಪಿಲ್ ಸಾಲ್ಟ್ , ಜೋಶ್ ಹಜ್ಲೇವುಡ್, ರಜತ್ ಪಾಟೀದರ್, ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ಕುನಾಲ್ ಪಾಂಡ್ಯ, ರೊಮಾರಿಯೊ ಶೆಪರ್ಡ್, ಭುವನೇಶ್ವರ್ ಕುಮಾರ್ ಪ್ರಮುಖ ಆಟಗಾರರಾಗಿದ್ದಾರೆ.
ಇನ್ನು ಎಸ್ ಆರ್ ಎಚ್ ತಂಡದಲ್ಲಿ ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸನ್, ಪ್ಯಾಟ್ ಕಮಿನ್ಸ್ ಮತ್ತು ಇಶಾನ್ ಮಾಲಿಂಗ, ಇಶಾನ್ ಕಿಶಾನ್, ಟ್ರಾವಿಸ್ ಹೆಡ್, ಹರ್ಷಲ್ ಪಟೇಲ್ ಸೇರಿದಂತೆ ಪ್ರಮುಖ ಆಟಗಾರರಿದ್ದಾರೆ.
