ಬೆಂಗಳೂರು: ಭಾರತೀಯ ಪ್ರೀಮಿಯರ್ ಲೀಗ್ -ಐಪಿಎಲ್ ಕ್ರಿಕೆಟ್‌ನ 19ನೇ ಆವೃತ್ತಿಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 202 ರನ್ ಗಳ ಗೆಲುವಿನ ಗುರಿ ನೀಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಎಸ್.ಆರ್.ಎಚ್. ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಆರ್ ಸಿಬಿ ಪರ ಜಾಕೋಬ್ ಡಫಿ ಮತ್ತು ರೊಮಾರಿಯೊ ಶಪರ್ಢ್ ತಲಾ 3 , ಸುಯಶ್ ಶರ್ಮಾ , ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್ ತಲಾ 1 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದ್ರಾಬಾದ್ ಪರ ಇಶಾನ್ ಕಿಶನ್ 80 ರನ್ ಗಳಿಸಿ ಔಟಾದರು.
ಐಪಿಎಲ್ ಪಂದ್ಯಾವಳಿ ಎರಡು ತಿಂಗಳ ಕಾಲ ಅಂದರೆ ಮೇ 31 ರವರೆಗೆ ನಡೆಯಲಿದೆ.
