ಸಮಗ್ರ ಸುದ್ದಿ

ಹುಬ್ಬಳ್ಳಿ – ಅಲಿಪುರ್ ದ್ವಾರ್ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

Share

ಬೆಂಗಳೂರು: ಬೇಸಿಗೆಯ ರಜಾ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಿಲ್ದಾಣಗಳ ನಡುವೆ, ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಕಾರ್ಯಾಚರಣೆ ಮಾಡಲಾಗುವುದು.

ರೈಲು ಸಂಖ್ಯೆ 07323 ಹುಬ್ಬಳ್ಳಿ–ಅಲಿಪುರ್ ದ್ವಾರ್ ವಿಶೇಷ ಎಕ್ಸ್ ಪ್ರೆಸ್ ರೈಲು 2026ರ ಏಪ್ರಿಲ್ 15ರ ಬುಧವಾರ ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ಹೊರಟು, ಶನಿವಾರ ಮಧ್ಯಾಹ್ನ 01:50ಕ್ಕೆ ಅಲಿಪುರ್ ದ್ವಾರ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 07324 ಅಲಿಪುರ್ ದ್ವಾರ್–ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 19ರ ಭಾನುವಾರ ಸಂಜೆ 04:25ಕ್ಕೆ ಅಲಿಪುರ್ ದ್ವಾರ್’ನಿಂದ ಹೊರಟು, ಬುಧವಾರ ಬೆಳಗ್ಗೆ 09:45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ತನ್ನ ಪ್ರಯಾಣದ ಅವಧಿಯಲ್ಲಿ ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಯಲಹಂಕ, ಧರ್ಮಾವರಂ, ಡೋನ್, ನಂದ್ಯಾಲ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಾಕ್, ಖರಗ್ಪುರ, ಅಂದುಲ್,ದನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರಸೋಯಿ, ಕಿಶನ್ ಗಂಜ್, ನ್ಯೂ ಜಲ್ಪೈಗುರಿ, ಸಿಲಿಗುರಿ, ಬಿನ್ನಗುರಿ ಮತ್ತು ಹಸಿಮಾರಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

20 ಎಲ್.ಹೆಚ್.ಬಿ ಬೋಗಿಗಳನ್ನು ಹೊಂದಿರುವ ಈ ರೈಲು, ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ.

ಬೆಂಗಳೂರು– ರೂಪ್ಸಾ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ರೂಪ್ಸಾ – ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಮೂರು ಟ್ರಿಪ್‌ಗಳ ವಿಶೇಷ ರೈಲು ಸೇವೆಯನ್ನು ಓಡಿಸಲಿದೆ.

ರೈಲು ಸಂಖ್ಯೆ 06545 ಎಸ್.ಎಂ.ವಿ.ಟಿ. ಬೆಂಗಳೂರು – ರೂಪ್ಸಾ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 15, ಏಪ್ರಿಲ್ 22 ಮತ್ತು ಏಪ್ರಿಲ್ 29 ರಂದು (ಬುಧವಾರ) ಸಂಜೆ 04:35 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಿಂದ ಹೊರಟು, ಮರುದಿನ ರಾತ್ರಿ 08:30 ಕ್ಕೆ ರೂಪ್ಸಾ ತಲುಪಲಿದೆ.
ರೈಲು ಸಂಖ್ಯೆ 06546 ರೂಪ್ಸಾ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 16, ಏಪ್ರಿಲ್ 23 ಮತ್ತು ಏಪ್ರಿಲ್ 30 ರಂದು (ಗುರುವಾರ) ರಾತ್ರಿ 11:30 ಕ್ಕೆ ರೂಪ್ಸಾ ನಿಲ್ದಾಣದಿಂದ ಹೊರಟು, ಶನಿವಾರ ಬೆಳಿಗ್ಗೆ 05:30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಈ ರೈಲುಗಳಿಗೆ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟಾ, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್ ಹಾಗೂ ಭದ್ರಕ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 12 ದ್ವಿತೀಯ ದರ್ಜೆ, 4 ಸ್ಲೀಪರ್ ದರ್ಜೆ, 2 ಎಸಿ 3-ಟೈರ್ ಹಾಗೂ 2 ಲಗೇಜ್-ಕಮ್‌-ಬ್ರೇಕ್‌ವ್ಯಾನ್‌ ಬೋಗಿಗಳು ಇರಲಿವೆ.

ಯಶವಂತಪುರ–ನ್ಯೂ ಜಲ್ಪೈಗುರಿ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಡುವೆ ಎರಡು ಟ್ರಿಪ್ಗಳ ವಿಶೇಷ ಎಕ್ಸ್ ಪ್ರೆಸ್ ರೈಲುನ್ನು ಓಡಿಸಲಿದೆ. ಈ ರೈಲು ಹಿಂದಿರುಗುವಾಗ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂದು ತಲುಪಲಿವೆ.

ರೈಲು ಸಂಖ್ಯೆ 06567 ಯಶವಂತಪುರ–ನ್ಯೂ ಜಲ್ಪೈಗುರಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 17 ಮತ್ತು 24 ರಂದು ಬೆಳಿಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು, ಮೂರನೇ ದಿನ ಬೆಳಿಗ್ಗೆ 7ಕ್ಕೆ ನ್ಯೂ ಜಲ್ಪೈಗುರಿ ತಲುಪಲಿದೆ. ಹಿಂದಿರುಗುವ ಹಾದಿಯಲ್ಲಿ, ರೈಲು ಸಂಖ್ಯೆ 06568 ನ್ಯೂ ಜಲ್ಪೈಗುರಿ–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು ಏಪ್ರಿಲ್ 20 ಮತ್ತು 27 ರಂದು ಬೆಳಿಗ್ಗೆ 8.30ಕ್ಕೆ ನ್ಯೂ ಜಲ್ಪೈಗುರಿಯಿಂದ ಹೊರಟು, ಮೂರನೇ ದಿನ ಬೆಳಿಗ್ಗೆ 9.55ಕ್ಕೆ ಬೆಂಗಳೂರು ಕಂಟೋನ್ಮೆಂಟ್’ಗೆ ಆಗಮಿಸಲಿದೆ.

ಮಾರ್ಗ ಮಧ್ಯದಲ್ಲಿ ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗೂಟಿ, ಧೋಣೆ, ನಂದ್ಯಾಲ್, ಮಾರ್ಕಾಪುರ ರೋಡ್, ನರಸರಾವ್ಪೇಟೆ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಸಾ, ಬ್ರಹ್ಮಪುರ, ಬಾಲುಗಾಂವ್, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್ಪುರ ಕಿಯೋಂಜರ್ ರೋಡ್, ಭದ್ರಕ್, ಖರಗ್ಪುರ, ಅಂದುಲ್, ಡನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್ ಮತ್ತು ಕಿಶನ್ಗಂಜ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ವಿಶೇಷ ರೈಲು ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್ ಹಾಗೂ ಸಾಮಾನ್ಯ ದ್ವಿತೀಯ ದರ್ಜೆ, ಲಗೇಜ್ ಮತ್ತು ಬ್ರೇಕ್ ವ್ಯಾನ್ ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರಲಿದೆ.


Share

You cannot copy content of this page