ಬೆಂಗಳೂರು, ನ.29: ಬೆಂಗಳೂರು ಪೂರ್ವ ನಗರ ಪಾಲಿಕೆಯ ಹೂಡಿ ವಿಭಾಗ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆದುಕೊಂಡು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದ ಕಟ್ಟಡಗಳ ಅನಧಿಕೃತ ಭಾಗವನ್ನು ಕಾರ್ಯಾಚರಣೆಯ ಮೂಲಕ ತೆರವು ಮಾಡಲಾಯಿತು ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ತಿಳಿಸಿದರು.
ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಾಣಗೊಂಡಿದ್ದ ಕಟ್ಟಡಗಳ ವಿವರಗಳು:
ಕಟ್ಟಡದ ಮಾಲೀಕರು:ಮಾಲಿನಿ ವಿಜಯಕುಮಾರ್,
ಸ್ವತ್ತಿನ ಸಂಖ್ಯೆ: 03, ಬೃಂದಾವನ ಬಡಾವಣೆ
30 x 40 ನಿವೇಶನದಲ್ಲಿ ತಳ ಮಹಡಿ, ನೆಲ ಮಹಡಿ, ಒಂದು ಮತ್ತು ಎರಡನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆದಿದ್ದು, ಹೆಚ್ಚುವರಿಯಾಗಿ ಮೂರು ಮತ್ತು ನಾಲ್ಕನೇ ಮಹಡಿಯನ್ನು ನಿರ್ಮಿಸಿರುವುದು ಕಂಡು ಬಂದಿರುತ್ತದೆ. ಹೆಚ್ಚುವರಿಯಾಗಿ ನಿರ್ಮಾಣಗೊಂಡಿರುವ ಕಟ್ಟಡದ ಭಾಗವನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಕಟ್ಟಡದ ಮಾಲೀಕರು: ಶಿವಪ್ರಕಾಶ್
ಸ್ವತ್ತಿನ ಸಂಖ್ಯೆ: 25ಎ, ವೈಟ್ ರೋಸ್ ಬಡಾವಣೆ
30x 50 ನಿವೇಶನದಲ್ಲಿ ತಳ ಮಹಡಿ, ನೆಲ ಮಹಡಿ, ಒಂದು ಮತ್ತು ಎರಡನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆದಿದ್ದು, ಹೆಚ್ಚುವರಿಯಾಗಿ ಮೂರು ಮತ್ತು ನಾಲ್ಕನೇ ಮಹಡಿಯನ್ನು ನಿರ್ಮಿಸಿರುವುದು ಕಂಡು ಬಂದಿರುತ್ತದೆ. ಹೆಚ್ಚುವರಿಯಾಗಿ ನಿರ್ಮಾಣಗೊಂಡಿರುವ ಕಟ್ಟಡದ ಭಾಗವನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಎರಡು ಕಟ್ಟಡದ ಮಾಲೀಕರಿಗೆ ಹೆಚ್ಚುವರಿಯಾಗಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡದ ಭಾಗ ತೆರವುಗೊಳಿಸುವ ಸಂಬಂಧ ಬಿಬಿಎಂಪಿ ಕಾಯ್ದೆ 2020 ರಂತೆ ಕಲಂ 248(1), (2) & (3) ರಂತೆ ವಿವಿಧ ದಿನಾಂಕದಂದು, ಕಾರಣ ಕೇಳಿ ನೋಟಿಸ್, ತಾತ್ಕಾಲಿಕ ಆದೇಶ, ಮತ್ತು ಸ್ಥಿರೀಕರಣ ಆದೇಶದ ನೋಟಿಸ್‌ನ್ನು ಜಾರಿ ಮಾಡಿ ಅನಧಿಕೃತ ಕಟ್ಟಡದ ಭಾಗಗಳನ್ನು ತೆರೆವುಗೊಳಿಸಲು ತಿಳಿಸಲಾಗಿತ್ತು. ಆದರೂ ಕಟ್ಟಡದ ಮಾಲೀಕರು ಅನಧಿಕೃತ ಕಟ್ಟಡದ ಭಾಗವನ್ನು ತೆರವುಗೊಳಿಸಲು ಕ್ರಮವಹಿಸಿರುವುದಿಲ್ಲ.
ನೈಸರ್ಗಿಕ ನ್ಯಾಯದ ಅಡಿಯಲ್ಲಿ ಕಟ್ಟಡ ಮಾಲೀಕರಿಗೆ ಹೆಚ್ಚಿನ ಕಾಲಾವಕಾಶಗಳನ್ನು ನೀಡಿದ್ದರೂ ಸಹಾ, ಸ್ವತ್ತಿನ ಮಾಲೀಕರು ಯಾವುದೇ ಕ್ರಮಗಳನ್ನು ಜರುಗಿಸದೇ ಇರುವುದರಿಂದ ಸ್ಥಿರೀಕರಣ ಆದೇಶದಂತೆ ಎರಡು ಕಟ್ಟಡಗಳ ಅನಧಿಕೃತ ಭಾಗವನ್ನು ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
