ಸಮಗ್ರ ಸುದ್ದಿ

ಧರೆಗುರುಳಿದ, ಅಪಾಯಕಾರಿ ಮರಗಳು ಹಾಗೂ ರೆಂಬೆ ಕೊಂಬೆ ತೆರವು ಕಾರ್ಯ ಚುರುಕು: ರಾಜೇಂದ್ರ ಚೋಳನ್

Share

ಬೆಂಗಳೂರು: ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರ ಕಟ್ಟು ನಿಟ್ಟಿನ ಸೂಚನೆ ಮೆರೆಗೆ ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಧರೆಗುರುಳಿದ, ಅಪಾಯಕಾರಿ ಮರಗಳು, ರೆಂಬೆ ಕೊಂಬೆಗಳು ಹಾಗೂ ಮಳೆ-ಗಾಳಿಗೆ ಬಿದ್ದ ಮರ, ರೆಂಬೆ ಕೊಂಬೆ ತೆರವು ಮಾಡುವ ಕಾರ್ಯ ಚುರುಕಿನಿಂದ ಸಾಗಿದೆ.

2026ನೇ ಏಪ್ರಿಲ್ 29 ರಿಂದ ಇಲ್ಲಿಯವರೆಗೆ ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 260 ಮರಗಳು ಹಾಗೂ 761 ರೆಂಬೆ ಕೊಂಬೆಗಳು ಧರೆಗುರುಳಿದ್ದು, ಬಿದ್ದ ಎಲ್ಲಾ ಮರಗಳನ್ನು ಹಾಗೂ ರೆಂಬೆ ಕೊಂಬೆ ತೆರವು ಮಾಡಲಾಗಿದೆ.
ತೆರವುಗೊಳಿಸಲು ಅಲ್ಲಲ್ಲಿ ಉಳಿದಿರುವುದನ್ನು ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮರಗಳು, ರೆಂಬೆ ಕೊಂಬೆಗಳು ಬೀಳುವುದರಿಂದ ಉಂಟಾಗುವ ಹಾನಿಗಳನ್ನು ತಡೆಯಲು ಮುಂಜಾಗೃತ ಕ್ರಮವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಪಾಯಕಾರಿ ಮರ ಹಾಗೂ ರೆಂಬೆ ಕೊಂಬೆ ತೆರವಿಗೆ ಆಯುಕ್ತರು ಕಾಲಕಾಲಕ್ಕೆ ನಿರ್ದೇಶನ ನೀಡುತ್ತಿದ್ದು, ಈ ಮೇರೆಗೆ ಅಪಾಯಕಾರಿ ಹಾಗೂ ಮಳೆ ಗಾಳಿಗೆ ಬೀಳುವ ಮರ, ರೆಂಬೆ ಕೊಂಬೆಗಳನ್ನು ಹಾಗೂ ತೆರವು ಮಾಡುವ ಕಾರ್ಯ ಅಗತ್ಯ ಸಲಕರಣೆ, ನುರಿತ ಸಿಬ್ಬಂದಿಗಳು ಹಾಗೂ ಕ್ರೇನ್ ಗಳ ಸಹಾಯದಿಂದ ಚುರುಕಿನಿಂದ ಸಾಗಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

“ಕಳೆದ 3 ದಿನಗಳಲ್ಲಿ ಬಿದ್ದ ಮರ, ರೆಂಬೆ ಕೊಂಬೆ ತೆರವು ಮಾಡಿದ ಸ್ಥಳಗಳ ವಿವರ

ರಾಜಭವನ ರಸ್ತೆ, ಎಂ. ಎಸ್. ಬಿಲ್ಡಿಂಗ್, ಇಂದಿರಾನಗರದ CMH ರಸ್ತೆ, 100 ಅಡಿ ರಸ್ತೆ, ಡಿಫೆನ್ಸ್ ಕಾಲೋನಿ, ಶ್ರೀ ರಾಮ ದೇವಸ್ಥಾನ ರಸ್ತೆಯ ಅಯ್ಯಪ್ಪ ದೇವಸ್ಥಾನ ಹತ್ತಿರ, ಈಶ್ವರ ಲೇಔಟ್, ಹೆಚ್. ಎ. ಎಲ್ ಹಂತ-2, ಹಂತ-3, ಹಂತ-1 ವಿವಿಧ ಸ್ಥಳಗಳು, ಹಲಸೂರು, ಬ್ರಿಗೇಡ್ ರಸ್ತೆ, ದೊಮ್ಮಲೂರು,
ರಾಮಸ್ವಾಮಿಪಾಳ್ಯ, ಪಿಳ್ಳಪ್ಪ ಗಾರ್ಡನ್, ಗೋರಿಪಾಳ್ಯ
ಅಶೋಕನಗರ, ನ್ಯೂ ತಿಪ್ಪಸಂದ್ರ, ಎಲ್. ಐ. ಸಿ ಕಾಲೋನಿ,
ಜೀವನ್ ಭೀಮಾನಗರ, ವಿವೇಕ ನಗರ, ವಿಲ್ಸನ್ ಗಾರ್ಡನ್,
ಲಕ್ಕಸಂದ್ರ, ಬಸವನಗುಡಿ ಪೊಲೀಸ್ ಠಾಣೆ ರಸ್ತೆಗಳಲ್ಲಿ ಮರಗಳನ್ನು ತೆರವುಗೊಳಿಸಲಾಗಿದೆ.

ಇನ್ನಿತರೆ ಸ್ಥಳಗಳಲ್ಲಿ ಅಪಾಯಕಾರಿ ಹಾಗೂ ಬಿದ್ದ ಮರ ರೆಂಬೆ ಕೊಂಬೆ ತೆರವು ಕಾರ್ಯ ಮಾಡುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಲಾಗಿದೆ.


Share

You cannot copy content of this page