ಕೃಷಿ ಸಮಗ್ರ ಸುದ್ದಿ

ಬೀದರ್ ಜಿಲ್ಲೆಯ ರೈತರಿಗೆ 246 ಕೋಟಿ ರೂ. ಅತ್ಯಧಿಕ ಬೆಳೆ ವಿಮೆ ಪರಿಹಾರ

Share

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಮತ್ತು ಸಂಸತ್ ಸದಸ್ಯ ಸಾಗರ್ ಖಂಡ್ರೆ ಅವರ ಪ್ರಯತ್ನದ ಫಲವಾಗಿ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೆ ಒಳಗಾದ ಜಿಲ್ಲೆಯ ರೈತರಿಗೆ 246.9 ಕೋಟಿ ರೂ. ಅತ್ಯಧಿಕ ಬೆಳೆ ವಿಮಾ ಪರಿಹಾರ ಲಭಿಸಿದೆ.

ಜಿಲ್ಲೆಯಲ್ಲಿ ಒಟ್ಟಾರೆ 202091 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, 121077 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿತ್ತು. ಮುಂಗಾರು ಹಂಗಾಮಿನಲ್ಲಿ 24690.25 ಕ್ಲೇಮ್ ಗಳು ಬಂದಿದ್ದು, 11052 ಕ್ಲೇಮ್ ಗಳನ್ನು ಇತ್ಯರ್ಥಪಡಿಸಿರುವ ವಿಮಾ ಕಂಪನಿ 110 ಕೋಟಿ ರೂ. ಮೊತ್ತದ ಕ್ಲೇಮ್ ಹಣವನ್ನು ಈಗಾಗಲೇ ಪಾವತಿ ಮಾಡಿತ್ತು.
ಇದರ ಹೊರತಾಗಿ 13638.21 ಕೋಟಿ ರೂ.ಗಳ ಕ್ಲೇಮ್ ವಿವಿಧ ಹಂತದಲ್ಲಿ ಬಾಕಿ ಉಳಿದಿತ್ತು. ಈ ಬಾಕಿಯನ್ನು ತ್ವರಿತವಾಗಿ ರೈತರಿಗೆ ನೀಡುವಂತೆ ಈಶ್ವರ ಖಂಡ್ರೆ ಮತ್ತು ಸಾಗರ್ ಖಂಡ್ರೆ ಅವರು ಕಂಪನಿಯೊಂದಿಗೆ ನಡೆಸಿದ ಸತತ ಸಭೆಯ ಹಿನ್ನೆಲೆಯಲ್ಲಿ ತೊಗರಿ, ಸೋಯಾಬಿನ್ ಉದ್ದು, ಹೆಸರು ಮತ್ತಿತರೆ ಬಿತ್ತನೆ ಮಾಡಿ, ಪ್ರಕೃತಿ ವಿಕೋಪದಿಂದ ನಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ರೈತರಿಗೆ ವಿಮೆ ಪರಿಹಾರ ಜಮಾ ಪ್ರಕ್ರಿಯೆ ಆರಂಭಗೊಂಡಿದೆ. ಉಳಿದ ಸುಮಾರು 85 ಕೋಟಿ ರೂ. ಹಣವೂ ಶೀಘ್ರವೇ ಬಿಡುಗಡೆಯಾಗಲಿದೆ.

ಈ ತಿಂಗಳ ಅಂತ್ಯದೊಳಗೆ ₹51 ಕೋಟಿ ರೂ.ಗೂ ಅಧಿಕ ಪರಿಹಾರ ಜಿಲ್ಲೆಯ ಎಲ್ಲಾ ತಾಲೂಕಿನ ಅರ್ಹ ರೈತರ ಖಾತೆಗಳಿಗೆ ಹಂತ ಹಂತವಾಗಿ ಜಮಾ ಆಗಲಿದೆ. ರೈತರಿಗೆ ಸಕಾಲದಲ್ಲಿ ಮತ್ತು ವಿಳಂಬವಿಲ್ಲದೆ ನ್ಯಾಯಯುತವಾಗಿ ಬೆಳೆ ವಿಮೆ ಪರಿಹಾರ ದೊರಕಬೇಕು ಎಂದು ಸಚಿವ ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ ಖಂಡ್ರೆ ಪ್ರತಿಪಾದಿಸಿದ್ದರು. ರೈತರ ಸಮಸ್ಯೆಗಳ ಕುರಿತಂತೆ ತ್ವರಿತವಾಗಿ ಮೇಲ್ವಿಚಾರಣೆ ನಡೆಸಿ, ಅರ್ಹ ರೈತರಿಗೆ ಶೀಘ್ರ ಪರಿಹಾರ ದೊರಕುವಂತೆ ವಿಶೇಷ ಗಮನ ಹರಿಸಿದ್ದರು.


Share

You cannot copy content of this page