ಕ್ರೀಡೆ

ಖೇಲೋ ಇಂಡಿಯಾ ಟೂರ್ನಿಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಹಾಕಿ ತಂಡಕ್ಕೆ ಕಂಚಿನ ಪದಕ

Share

ಬೆಂಗಳೂರು:ರಾಜಸ್ತಾನದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ತಂಡ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದೆ.

ಜೈಪುರದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪೂರ್ವಾಂಚಲದ ವೀರಬಹದ್ದೂರ್ ಸಿಂಗ್  ಯೂನಿವರ್ಸಿಟಿ ವಿರುದ್ಧ  ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ತಂಡ  3-0 ಗೋಲುಗಳ  ಅಂತರದಲ್ಲಿ ಜಯಗಳಿಸಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ತಂಡ ಈಗಾಗಲೇ ಈಜು ಸ್ಪರ್ಧೆಯಲ್ಲಿ 4 ರಜತ ಪದಕಗಳು ಹಾಗೂ ಫೆನ್ಸಿಂಗ್ ಫಾಯಿಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದೆ.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಮೇಶ್.ಬಿ., ಕುಲಸಚಿವರಾದ ಎ. ನವೀನ್ ಜೋಸೆಫ್  ಹಾಗೂ ಪ್ರಭಾರ ಕ್ರೀಡಾ ನಿರ್ದೇಶಕರಾದ ಪ್ರೊ. ಕೆ. ಶಿವಶಂಕರ್ ವಿಜೇತ ಸ್ಪರ್ಧಿಗಳಿಗೆ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.


Share

You cannot copy content of this page