ಸಮಗ್ರ ಸುದ್ದಿ

ರಾಜ್ಯದ ಸಚಿವ ಸಂಪುಟ ವಿಸ್ತರಣೆ; ಸಂಪುಟಕ್ಕೆ 19 ನೂತನ ಸಚಿವರು ಸೇರ್ಪಡೆ 

Share

ಬೆಂಗಳೂರು:ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನೂತನ ಸಚಿವರುಗಳು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಲೋಕಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ,  ಗೌರವಾನ್ವಿತ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರುಗಳಿಗೆ ಅಧಿಕಾರಪದ ಮತ್ತು ಗೋಪ್ಯತಾ ಪ್ರಮಾಣ ವಚನ ಭೋದಿಸಿದರು.

19 ಜನ ನೂತನ ಸಚಿವರುಗಳಾಗಿ  ಗೌರವಾನ್ವಿತ ರಾಜ್ಯಪಾಲರಿಂದ ಅಧಿಕಾರಪದ ಮತ್ತು ಗೋಪ್ಯಾತಾ ಪ್ರಮಾಣ ವಚನ ಸ್ವೀಕರಿಸಿದರು.

ಡಾ. ಅಜಯ್ ಸಿಂಗ್, ಹೆಚ್.ಸಿ.ಬಾಲಕೃಷ್ಣ,  ಎನ್.ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಬಿ.ನಾಗೇಂದ್ರ, ಸಿ.ಪುಟ್ಟರಂಗಶೆಟ್ಟಿ, ಟಿ.ರಘುಮೂರ್ತಿ, ರಿಜ್ವಾನ್ ಅರ್ಷದ್,  ರುದ್ರಪ್ಪ ಮಾನಪ್ಪ  ಲಮಾಣಿ,  ಕೆ.ಎಂ.ಶಿವಲಿಂಗೇಗೌಡ, ಶಿವರಾಜ್ ತಂಗಡಗಿ,  ವಿಜಯಾನಂದ ಕಾಶಪ್ಪನವರ್  ದೇವರ ಹೆಸರಿನಲ್ಲಿ, 

ಕೆ.ಎಸ್.ಬಸವಂತಪ್ಪ  ಜಗಜ್ಯೋತಿ ಬಸವೇಶ್ವರ ಹೆಸರಿನಲ್ಲಿ, 

ಪಿ.ಎಂ. ನರೇಂದ್ರಸ್ವಾಮಿ  ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ, ಬಸವರಾಜ ರಾಯರೆಡ್ಡಿ, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್  ಶ್ರದ್ಧಾಪೂರ್ವಕವಾಗಿ, ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,  ಎ.ಐ.ಸಿ.ಸಿ ಕರ್ನಾಟಕ ಉಸ್ತುವಾರಿ ಹಾಗೂ ಲೋಕಸಭಾ ಸದಸ್ಯರಾದ ರಣದೀಪ್ ಸಿಂಗ್ ಸುರ್ಜೇವಾಲ,  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್,  ಸಚಿವರು, ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು, ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಕಾರ್ಯಕ್ರಮ ನಿರೂಪಿಸಿದರು.


Share

You cannot copy content of this page