ಸಮಗ್ರ ಸುದ್ದಿ

ʼಗೋಬರ್‌ಧನ್’ ಯೋಜನೆಗೆ ಕೇಂದ್ರ ಅನುಮೋದನೆ|₹23,731 ಕೋಟಿ ವೆಚ್ಚದಲ್ಲಿ ʼಜೈವಿಕ ಅನಿಲʼ ಉತ್ಪಾದನೆಗೆ ಉತ್ತೇಜನ

Share

ನವದೆಹಲಿ: ಕೇಂದ್ರ ಸರ್ಕಾರ ₹23,731 ಕೋಟಿ ವೆಚ್ಚದಲ್ಲಿ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಗೆ ಉತ್ತೇಜನ ನೀಡಲು ʼಗೋಬರ್‌ಧನ್’ ಯೋಜನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಗುರುವಾರ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ʼಗೋಬರ್‌ಧನ್’ಗೆ ಅನುಮೋದನೆ ಸಿಕ್ಕಿದ್ದು, 2026-27ನೇ ಆರ್ಥಿಕ ವರ್ಷದಿಂದ 2035-36ರವರೆಗಿನ ಒಂದು ದಶಕಕ್ಕೆ ಆರಂಭಿಕವಾಗಿ ₹23,731 ಕೋಟಿ ಮೀಸಲಿರಿಸಲಾಗಿದೆ. ಈ ಮಹತ್ವದ ಯೋಜನೆ ಸಾವಯವ ತ್ಯಾಜ್ಯವನ್ನು ʼಸ್ವಚ್ಛ ಇಂಧನ’ವನ್ನಾಗಿ ಪರಿವರ್ತಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತ ಜೈವಿಕ ಅನಿಲ (CBG)ಗೂ ಒತ್ತು ನೀಡುತ್ತಿದೆ. ಹೀಗಾಗಿ ಇದೀಗ ಭಾರತದ ರಾಷ್ಟ್ರೀಯ ಏಕೀಕೃತ ಯೋಜನೆ ʼಗೋಬರ್‌ಧನ್’ಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ʼಗೋಬರ್‌ಧನ್’ ಯೋಜನೆ ದೇಶೀಯವಾಗಿ ಇಂಧನ ಬೇಡಿಕೆ, ಸ್ಥಿರ ಬೆಲೆ ನಿಗದಿ, ಬಂಡವಾಳ ಬೆಂಬಲ, ಪೈಪ್‌ಲೈನ್ ಸಂಪರ್ಕ ಮತ್ತು ಆರ್ಥಿಕ ನೆರವಿನ ಲಭ್ಯತೆ ಮೂಲಕ CBG ಉತ್ಪಾದನೆಯನ್ನು ವೇಗಗೊಳಿಸಲಿದೆ ಎಂದಿದ್ದಾರೆ.

ಈ ಯೋಜನೆ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. ರೈತರ ಆದಾಯವನ್ನೂ ಹೆಚ್ಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಜತೆಗೆ ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದ್ದಾರೆ.


Share

You cannot copy content of this page