ಬೆಂಗಳೂರು: ಎರಡನೇ ಹಂತದ ಸಂಪುಟ ಪುನರ್‌ರಚನೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಅಂತಿಮ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಇಬ್ಬರು ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ.
ಕೆ.ಎಚ್.ಮುನಿಯಪ್ಪ ಅವರಿಗೆ ಆಹಾರ ಸರಬರಾಜು ಇಲಾಖೆ ಬದಲಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆಯ ಬದಲು ಅರಣ್ಯ ಖಾತೆ ನೀಡಲಾಗಿದೆ.
ಇನ್ನುಳಿದಂತೆ ಲಕ್ಷ್ಮಣ ಸವದಿ – ಸಹಕಾರ ಇಲಾಖೆ
ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ,
ಯು.ಟಿ.ಖಾದರ್ – ಆರೋಗ್ಯ ಮತ್ತು ಕಲ್ಯಾಣ ಇಲಾಖೆ,
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಸಂಸ್ಕೃತಿ, ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ,
ಎಚ್.ಸಿ.ಬಾಲಕೃಷ್ಣ – ಪೌರಾಡಳಿತ,
ಕೆ.ಎಸ್.ಬಸವಂತಪ್ಪ – ಮುಜರಾಯಿ, ಮೀನುಗಾರಿಕೆ,
ಎನ್.ಚಲುವರಾಯಸ್ವಾಮಿ – ಜಲಸಂಪನ್ಮೂಲ ಇಲಾಖೆ,
ಮಧುಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ,
ಎಸ್.ಎಸ್. ಮಲ್ಲಿಕಾರ್ಜುನ್ – ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆ, ಬಿ.ನಾಗೇಂದ್ರ – ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಪಿ.ಎಂ.ನರೇಂದ್ರಸ್ವಾಮಿ – ಕೃಷಿ ಇಲಾಖೆ,
ಸಿ.ಪುಟ್ಟರಂಗಶೆಟ್ಟಿ – ಪಶು ಸಂಗೋಪನೆ ಹಾಗೂ ರೇಷ್ಮೆ,
ಟಿ.ರಘುಮೂರ್ತಿ – ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ,
ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಪೂರೈಕೆ,
ರುದ್ರಪ್ಪ ಲಮಾಣಿ – ಸಕ್ಕರೆ ಮತ್ತು ಜವಳಿ, ಶಿವಲಿಂಗೇಗೌಡ – ಅಬಕಾರಿ, ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ,
ಜಮೀರ್ ಅಹಮ್ಮದ್ ಖಾನ್ – ವಸತಿ, ಡಾ.ಅಜಯ್ ಧರಂಸಿಂಗ್ ಅವರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಗಿದೆ.
