ಸಮಗ್ರ ಸುದ್ದಿ

ಜೋಗ್ ಫಾಲ್ಸ್’ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಯಿಂದ ವಿಶೇಷ ಪ್ಯಾಕೇಜ್

Share

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಳೆಗಾಲದ ಈ ವೈಭವೋಪೇತ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗಾಗಿ ಜಗತ್ಪ್ರಸಿದ್ಧ ಜೋಗ ಜಲಪಾತ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ನೂತನ “ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್” ಸೇವೆಯನ್ನು ಆರಂಭಿಸಿದೆ.

ಈ ವಿಶೇಷ ಪ್ಯಾಕೇಜ್ ಕಾರ್ಯಾಚರಣೆಯು ಇದೇ ಆಗಸ್ಟ್ ಮಾಹೆಯಿಂದ ಪ್ರತಿ ವಾರಾಂತ್ಯ (ಶನಿವಾರ ಮತ್ತು ಭಾನುವಾರ) ಹಾಗೂ ಸಾರ್ವಜನಿಕ ರಜಾ ದಿನಗಳಂದು ಆಯೋಜಿಸಲಾಗಿದೆ.

ಮಳೆಗಾಲದಲ್ಲಿ ಸುಂದರವಾಗಿ ಭೋರ್ಗರೆಯುವ ಜೋಗ ಜಲಪಾತದೊಂದಿಗೆ ಸುತ್ತಮುತ್ತಲಿನ ಪ್ರಮುಖ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಲಕರ ಮತ್ತು ಸಂಪೂರ್ಣ ವ್ಯವಸ್ಥಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಬೆಂಗಳೂರು, ದಾವಣಗೆರೆ, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಾಸನ, ಶಿವಮೊಗ್ಗ ಮತ್ತು ತುಮಕೂರು ನಗರಗಳಿಂದ ಈ ಸೇವೆ ಲಭ್ಯವಿರಲಿದೆ.

ಬೆಂಗಳೂರಿನಿಂದ ನಾನ್ ಎಸಿ ಸ್ಲೀಪರ್ ಬಸ್ಸು ಶುಕ್ರವಾರ ಮತ್ತು ಶನಿವಾರ ರಾತ್ರಿ 22:30 ಗಂಟೆಗೆ ಬೆಂಗಳೂರು-ವರದಹಳ್ಳಿ – ವರದಮೂಲ – ಇಕ್ಕೇರಿ – ಕೆಳದಿ – ಸಾಗರ – ಜೋಗ್‌ಫಾಲ್ಸ್ (ವಸತಿ ಸೌಲಭ್ಯದೊಂದಿಗೆ) ಹೊರಡಲಿದ್ದು, ಟಿಕೆಟ್ ಶುಲ್ಕ ರೂ. 3,300/- ಇರುತ್ತದೆ.

ದಾವಣಗೆರೆಯಿಂದ ಅಶ್ವಮೇಧ ಬಸ್ಸು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 06:00 ಗಂಟೆಗೆ ದಾವಣಗೆರೆ – ಸಿಗಂದೂರು – ಇಕ್ಕೇರಿ ಕೋಟೆ – ವರದಮೂಲ ಮಾರ್ಗವಾಗಿ ಜೋಗ್ ಹೊರಡಲಿದ್ದು, ಟಿಕೆಟ್ ಶುಲ್ಕ ರೂ. 600/- ಇರುತ್ತದೆ.

ಚಳ್ಳಕೆರೆಯಿಂದ ಕರ್ನಾಟಕ ಸಾರಿಗೆ ಬಸ್ಸು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 05:15 ಗಂಟೆಗೆ ಚಳ್ಳಕೆರೆ – ಚಿತ್ರದುರ್ಗ – ಹೊಳಲ್ಕೆರೆ – ಇಕ್ಕೇರಿ –ಮಾರ್ಗವಾಗಿ ಜೋಗಫಾಲ್ಸ್ ಗೆ ಹೊರಡಲಿದ್ದು ಟಿಕೆಟ್ ಶುಲ್ಕ ರೂ. 600/ ಇರುತ್ತದೆ.

ಚಿತ್ರದುರ್ಗದಿಂದ ಕರ್ನಾಟಕ ಸಾರಿಗೆ ಬಸ್ಸು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 06:15 ಗಂಟೆಗೆ ಚಿತ್ರದುರ್ಗ – ಹೊಳಲ್ಕೆರೆ – ಇಕ್ಕೇರಿ ಮಾರ್ಗವಾಗಿ ಜೋಗ್‌ಫಾಲ್ಸ್ ಗೆ ಹೊರಡಲಿದ್ದು, ಟಿಕೆಟ್ ಶುಲ್ಕ ರೂ 500/ ಇರುತ್ತದೆ.

ಹೊಳಲ್ಕೆರೆ ಕರ್ನಾಟಕ ಸಾರಿಗೆ ಬಸ್ಸು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 07:15 ಗಂಟೆಗೆ ಹೊಳಲ್ಕೆರೆ – ಇಕ್ಕೇರಿ ಮಾರ್ಗವಾಗಿ ಜೋಗಫಾಲ್ಸ್ ಗೆ ಹೊರಡಲಿದ್ದು ಟಿಕೆಟ್ ಶುಲ್ಕ 450/- ಇರುತ್ತದೆ.

ಹಾಸನದಿಂದ ಅಶ್ವಮೇಧ ಬಸ್ಸು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 05:35 ಗಂಟೆಗೆ ಹಾಸನ ಮಾರ್ಗವಾಗಿ ಜೋಗ್‌ಫಾಲ್ಸ್ ಗೆ ಹೊರಡಲಿದ್ದು, ಟಿಕೆಟ್ ಶುಲ್ಕ ರೂ. 700/ ಇರುತ್ತದೆ.

ಶಿವಮೊಗ್ಗದಿಂದ ಕರ್ನಾಟಕ ಸಾರಿಗೆ ಬಸ್ಸು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 08:00 ಗಂಟೆಗೆ ಶಿವಮೊಗ್ಗ – ಸಿಗಂದೂರು – ವರದಮೂಲ – ಇಕ್ಕೇರಿ – ಕೆಳದಿ ಮಾರ್ಗವಾಗಿ ಜೋಗಫಾಲ್ಸ್ ಗೆ ಹೊರಡಲಿದ್ದು, ಟಿಕೆಟ್ ಶುಲ್ಕ ರೂ 450/-ಇರುತ್ತದೆ.

ತುಮಕೂರಿನಿಂದ ಕರ್ನಾಟಕ ಸಾರಿಗೆ ಬಸ್ಸು ಶುಕ್ರವಾರ ಮತ್ತು ಶನಿವಾರ ರಾತ್ರಿ 21:30 ಗಂಟೆಗೆ ಇಕ್ಕೇರಿ – ವರದಮೂಲ ಮಾರ್ಗವಾಗಿ ಜೋಗಫಾಲ್ಸ್ ಗೆ ಹೊರಡಲಿದ್ದು ಟಿಕೆಟ್ ಶುಲ್ಕ ರೂ. 1,000/- ಇರುವುದು.

ಸಾರ್ವಜನಿಕ ಪ್ರಯಾಣಿಕರು ಮೇಲ್ಕಂಡ ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ www.ksrtc.in ಮತ್ತು www.ksrtc.karnataka.gov.in ವೆಬ್‌ಸೈಟ್‌ಗಳ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.

ಹೆಚ್ಚಿನ ಮಾಹಿತಿ / ವಿಚಾರಣೆಗಾಗಿ ದೂರವಾಣಿ ಸಂಖ್ಯೆ: 080-26252625 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Share

You cannot copy content of this page