ಸಮಗ್ರ ಸುದ್ದಿ

200 ಕೇಂದ್ರಗಳಲ್ಲಿ AIAPGET ಪರೀಕ್ಷೆ ಯಶಸ್ವಿಗೊಳಿಸಿದ NTA | ವಿದ್ಯುತ್ ವ್ಯತ್ಯಯದಿಂದ ತೊಂದರೆಗಿಡಾದ ಜೈಪುರ ಕೇಂದ್ರದ 49 ಅಭ್ಯರ್ಥಿಗಳಿಗೆ ಸೆ.1ರಂದು ಮರು ಪರೀಕ್ಷೆ

Share

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ NTAಗೆ ಮೇಜರ್ ಸರ್ಜರಿ ನಡೆಸಿದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದೀಗ “AIAPGET” ಪರೀಕ್ಷೆಯನ್ನು ಯಶಸ್ವಿಗೊಳಿಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ದೇಶಾದ್ಯಂತ 200 ಕೇಂದ್ರಗಳಲ್ಲಿ AIAPGET ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, 35,788 ಅಭ್ಯರ್ಥಿಗಳು ಪರೀಕ್ಷೆ ಪೂರ್ಣಗೊಳಿಸಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ದೇಶದ ಆಯುಶ್ ಕಾಲೇಜುಗಳಲ್ಲಿ ಆಯುರ್ವೇದ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ವೈದ್ಯಕೀಯ ಕೋರ್ಸ್‌ಗಳ ಸ್ನಾತಕೋತ್ತರ ಪದವಿ (MD/MS) ಪ್ರವೇಶ ಪರೀಕ್ಷೆಗೆ (AIAPGET) ಶನಿವಾರ ಮೊದಲ ಶಿಫ್ಟಲ್ಲಿ ಒಟ್ಟು 36,979 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 35,837 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜೈಪುರದ ಒಂದೇ ಒಂದು ಪರೀಕ್ಷಾ ಕೇಂದ್ರ ಹೊರತುಪಡಿಸಿದರೆ ಉಳಿದೆಡೆ ಎಲ್ಲಾ ಕೇಂದ್ರಗಳಲ್ಲೂ ಅಭ್ಯರ್ಥಿಗಳು ಮೊದಲ ಶಿಫ್ಟ್ ಅಲ್ಲಿ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗೆ ಹಾಜರಾದ 35,837 ಅಭ್ಯರ್ಥಿಗಳ ಪೈಕಿ 35,788 ಅಭ್ಯರ್ಥಿಗಳು ಪರೀಕ್ಷೆ ಪೂರ್ಣಗೊಳಿಸಿದ್ದಾರೆ.

ಆಗಸ್ಟ್ 22ರಂದು shift-1 ನಲ್ಲಿ ನಡೆದ AIAPGET ಪರೀಕ್ಷೆ ವೇಳೆ ಜೈಪುರದ ಶ್ರೀ ಸತ್ಯಸಾಯಿ ಪಿಜಿ ಕಾಲೇಜು ಕೇಂದ್ರದಲ್ಲಿ ಮಾತ್ರ ವಿದ್ಯುತ್ ವ್ಯತ್ಯಯದಿಂದಾಗಿ ಅಭ್ಯರ್ಥಿಗಳಿಗೆ ಸ್ವಲ್ಪ ತೊಡಕಾಗಿದೆ. ಅಲ್ಲಿ 192 ಅಭ್ಯರ್ಥಿಗಳ ಪೈಕಿ 49 ಅಭ್ಯರ್ಥಿಗಳಿಗೆ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 1 ಕ್ಕೆ ಮರು ಪರೀಕ್ಷೆ: ವಿದ್ಯುತ್ ವ್ಯತ್ಯಯದಿಂದ ಆದ ತೊಂದರೆಯಿಂದಾಗಿ ಈ 49 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಜೈಪುರದ ‘ರಾಜಸ್ಥಾನ್ ಕಾಲೇಜು ಆಫ್ ಇಂಜಿನಿಯರಿಂಗ್ ಫಾರ್ ವುಮೆನ್’ ಈ ಕೇಂದ್ರದಲ್ಲಿ ಮರು ಪರೀಕ್ಷೆ ನಡೆಸಲು NTA ಕ್ರಮ ಕೈಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಜೈಪುರದ ಶ್ರೀ ಸತ್ಯಸಾಯಿ ಪಿಜಿ ಕಾಲೇಜು ಕೇಂದ್ರದಲ್ಲಿ ಪರೀಕ್ಷಾ ನಿರ್ವಹಣಾ ಸಂಸ್ಥೆಯಾದ ‘M/S Eduquity Career Technologies Private Limited’ ಗೆ ಸಂಬಂಧಿಸಿದ ಕಾರಣದಿಂದಾಗಿ ಉಂಟಾದ ವಿದ್ಯುತ್ ವ್ಯತ್ಯಯದಿಂದಾಗಿ ಪರೀಕ್ಷೆ ಪೂರ್ಣಗೊಳಿಸಲು ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಇದಕ್ಕಾಗಿ ವಿಷಾದಿಸುತ್ತೇನೆ ಎಂದಿದ್ದಾರೆ .

ವಿದ್ಯುತ್ ವ್ಯತ್ಯಯ ಸಮಸ್ಯೆ ಅನುಭವಿಸಿದ 49 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ನೀಡಲಾಗುವ ಪರಿಷ್ಕೃತ ಪ್ರವೇಶ ಪತ್ರದ ಮೂಲಕ ಹೆಚ್ಚಿನ ವಿವರ ತಿಳಿಸಲಾಗುವುದು. ಏನೇ ಸಂದೇಹ, ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಕ್ಕಾಗಿ ಅಭ್ಯರ್ಥಿಗಳು 011-40759000 / 011-69227700 ಸಂಖ್ಯೆಗೆ ಕರೆ ಮಾಡಬಹುದು ಅಥವಾ aiapget@nta.ac.in ಮೂಲಕ NTA ಗೆ ಇಮೇಲ್ ಮಾಡಬಹುದು ಎಂದೂ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.


Share

You cannot copy content of this page