ಕೆ.ಆರ್.ಪುರ: ಶ್ರೀ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನಲ್ಲಿ ಅಕ್ಕ-ತಂಗಿಯರು ಹಾಗೂ ತಾಯಂದಿರಿಗೆ ಆತ್ಮೀಯವಾಗಿ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಬಾಗಿನ ವಿತರಿಸಿದರು.
ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯುವ ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಬಾಗಿನ ವಿತರಣಾ ಸಮಾರಂಭದಲ್ಲಿ ಕ್ಷೇತ್ರದ ಸಾವಿರಾರು ಮಹಿಳೆಯರು ಇದರಲ್ಲಿ ಭಾಗವಹಿಸಿ ಹಬ್ಬದ ಸಂತಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಶಾಸಕ ಬೈರತಿ ಬಸವರಾಜು, ಗೌರಿ ಹಬ್ಬ ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿ, ಬಾಂಧವ್ಯ ಮತ್ತು ತಾಯಿ-ಸಹೋದರಿಯರ ಪ್ರೀತಿಯ ಸಂಕೇತ. ಈ ಪವಿತ್ರ ಹಬ್ಬದ ಶುಭ ಸಂದರ್ಭದಲ್ಲಿ ನಮ್ಮ ರಾಮಮೂರ್ತಿನಗರ ವಾರ್ಡ್‌ನ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯರಿಗೆ ಹಬ್ಬದ ಸಂತಸವನ್ನು ಇಮ್ಮಡಿಗೊಳಿಸಲು ಬಾಗಿನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ತನ್ನ ಕ್ಷೇತ್ರದ ಮಹಿಳೆಯರು ಕೇವಲ ಮತದಾರರಲ್ಲ, ಅವರು ನನ್ನ ಸ್ವಂತ ಕುಟುಂಬದ ಸದಸ್ಯರು ಇದ್ದಂತೆ. ಈ ಬಾಗಿನವು ಕೇವಲ ವಸ್ತುವಲ್ಲ; ಅದು ನಿಮ್ಮ ಮೇಲಿರುವ ನನ್ನ ಗೌರವ, ಪ್ರೀತಿ ಮತ್ತು ಕೃತಜ್ಞತೆಯ ಸಂಕೇತ. ಹೊರಮಾವು ವಾರ್ಡ್‌ನ ಪ್ರತಿಯೊಬ್ಬ ಅಕ್ಕ-ತಂಗಿಯರು, ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಬಾಗಿನವನ್ನು ಸ್ವೀಕರಿಸುವುದು ಸಂತಸ ತಂದಿದೆ. ಶ್ರೀ ಗೌರಿ-ಗಣಪತಿಯು ನಿಮ್ಮೆಲ್ಲರಿಗೂ ಆಯುಷ್ಯ, ಆರೋಗ್ಯ, ಸುಖ-ಶಾಂತಿ ನೀಡಿ ಕಾಪಾಡಲಿ ಎಂದು ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಭೈರತಿ ಗಣೇಶ್, ಹೊರಮಾವು ವಾರ್ಡ್ ಅಧ್ಯಕ್ಷರಾದ ಸತೀಶ್, ಮಹೇಶ್ ( ಮಗಿ), ಮತ್ತಿತರರು ಉಪಸ್ಥಿತರಿದ್ದರು.
