ಸಮಗ್ರ ಸುದ್ದಿ

ಕರ್ನಾಟಕದಲ್ಲಿ ಹೂಡಿಕೆ, ತಂತ್ರಜ್ಞಾನ ಸಹಕಾರಕ್ಕೆ ಹೆಚ್ಚಿನ ಅವಕಾಶ: ಕೊರಿಯಾ ನಿಯೋಗದೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ

Share

ಬೆಂಗಳೂರು: ದಕ್ಷಿಣ ಕೊರಿಯಾದ ಪ್ರಮುಖ ಉದ್ಯಮ, ಬಂಡವಾಳ ಹೂಡಿಕೆ ಹಾಗೂ ಉದ್ಯಮ ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಇಂದು ವಿಕಾಸಸೌಧದಲ್ಲಿ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ, ಉದ್ಯಮ ವಿಸ್ತರಣೆ, ನವೋದ್ಯಮ ಸಹಕಾರ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಚರ್ಚಿಸಿತು.

ನಿಯೋಗದಲ್ಲಿ ಡಿಎಸ್‌ಸಿ ಇನ್ವೆಸ್ಟ್‌ಮೆಂಟ್, ಜಿಎಸ್ ವೆಂಚರ್ಸ್, ಸಿಜೆ ಇನ್ವೆಸ್ಟ್‌ಮೆಂಟ್, ಕ್ಯಾಪ್‌ಸ್ಟೋನ್ ಪಾರ್ಟ್ನರ್ಸ್, ಸಿಜೆ ಚೆಲ್‌ಜೆಡಾಂಗ್ ಹಾಗೂ ಗೋ ಪಿಜ್ಜಾ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿದ್ಯುನ್ಮಾನ, ಅರೆವಾಹಕ, ವಿಮಾನಯಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಹವಾಮಾನ ತಂತ್ರಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿರುವ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಾಯಿತು.ಕೊರಿಯಾ ಹೂಡಿಕೆದಾರರು ಮತ್ತು ಕರ್ನಾಟಕದ ನವೋದ್ಯಮಗಳ ನಡುವೆ ನೇರ ಸಂಪರ್ಕ ಕಲ್ಪಿಸುವುದು, ಕಾರ್ಯತಂತ್ರದ ಹೂಡಿಕೆ ಹಾಗೂ ತಂತ್ರಜ್ಞಾನ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸುವ ಬಗ್ಗೆಯೂ ಮಾತುಕತೆ ನಡೆಯಿತು.

ಸಿಜೆ ಚೆಲ್‌ಜೆಡಾಂಗ್ ಸಂಸ್ಥೆಯೊಂದಿಗೆ ಆಹಾರ ನಾವೀನ್ಯತೆ, ಜೈವಿಕ ತಂತ್ರಜ್ಞಾನ, ಹುದುಗಿಸುವಿಕೆ ತಂತ್ರಜ್ಞಾನ, ಪೌಷ್ಟಿಕಾಂಶ, ಆಹಾರ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು ಕರ್ನಾಟಕ–ದಕ್ಷಿಣ ಕೊರಿಯಾ ನಡುವಿನ ಜಾಗತಿಕ ನಾವೀನ್ಯತಾ ಮೈತ್ರಿ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಕರ್ನಾಟಕದ ನವೋದ್ಯಮಗಳಿಗೆ ಕೊರಿಯಾದಲ್ಲಿ ಮಾರುಕಟ್ಟೆ ಮತ್ತು ಹೂಡಿಕೆ ಅವಕಾಶಗಳನ್ನು ವಿಸ್ತರಿಸುವ ಬಗ್ಗೆಯೂ ಚರ್ಚಿಸಲಾಯಿತು.

ಮುಂಬರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಹೆಚ್ಚಿನ ಕೊರಿಯಾ ಹೂಡಿಕೆದಾರರು ಹಾಗೂ ನವೋದ್ಯಮಗಳ ಭಾಗವಹಿಸುವಿಕೆ, ವಿಶೇಷ ಅಧಿವೇಶನಗಳು, ಉದ್ಯಮ–ಉದ್ಯಮ ಸಂವಾದಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ಹೆಚ್ಚಿಸುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.


Share

You cannot copy content of this page