ಸಮಗ್ರ ಸುದ್ದಿ

ಕರಾಮುವಿ: ಬ್ಯಾಂಕಿಂಗ್, ಎಸ್‍ಎಸ್‍ಸಿ ಹಾಗೂ ಆರ್‍ಆರ್‍ ಬಿ ಪರೀಕ್ಷೆಗಳಿಗೆ 45 ದಿನಗಳ ಸ್ಪರ್ಧಾತ್ಮಕ ತರಬೇತಿ

Share

ಮೈಸೂರು:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ದೇಶದ ವಿವಿಧ ಬ್ಯಾಂಕಿಂಗ್, ಎಸ್‍ಎಸ್‍ಸಿ ಹಾಗೂ ಆರ್‍ಆರ್‍ ಬಿ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ಕಾಲ ಉಚಿತ/ವಿಶೇಷ ತರಬೇತಿಯನ್ನು ನೀಡಲು ನಿರ್ಧರಿಸಿದೆ.

ಆಸಕ್ತರು 2026 ರ ಅಕ್ಟೊಬರ್ 19 ರ ಒಳಗಾಗಿ ದೂರವಾಣಿ ಸಂಖ್ಯೆ: 0821-2515944 ಮೂಲಕ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ನೋಂದಾಯಿಸಿಕೊಳ್ಳಬಹುದು.

ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕರಾಮುವಿ ಕುಲಸಚಿವ ಪ್ರೊ. ಎಂ.ಪಿ. ಸದಾಶಿವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page