ಸಮಗ್ರ ಸುದ್ದಿ

ಸರಾಸರಿ ನಿತ್ಯ 2.5 ಲಕ್ಷ ಮಾನವದಿನ ಸೃಷ್ಟಿ, 86,042 ಕಾಮಗಾರಿ ಆರಂಭ: ಈಶ್ವರ್ ಖಂಡ್ರೆ

Share

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ನಿತ್ಯ ಸರಾಸರಿ 2.5ಲಕ್ಷ ಮಾನವದಿನ ಸೃಜಿಸಲಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 86,042 ಕಾಮಗಾರಿ ಪ್ರಗತಿಯಲ್ಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಪೈಕಿ ಪರಿಶಿಷ್ಟ ಜಾತಿಯ 1,95,871 ಕುಟುಂಬಗಳಿಗೆ ಉಗ್ಯೋಗ ಒದಗಿಸಲಾಗಿದ್ದು 3,02,153 ಕಾರ್ಮಿಕರು ಕೆಲಸ ಮಾಡಿದ್ದಾರೆ. ಅದೇ ರೀತಿ 1,41,449 ಪರಿಶಿಷ್ಟ ಪಂಗಡದ ಕುಟುಂಬಗಳ 2,28,200 ಅಕುಶಲ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಇವರಲ್ಲಿ 8,57,158 ಮಹಿಳಾ ಕಾರ್ಮಿಕರು ಎಂದು ವಿವರಿಸಿದ್ದಾರೆ.

ಜುಲೈ 1ರಿಂದ ಇಲ್ಲಿಯವರೆಗೆ ಸೃಜಿಸಲಾಗಿರುವ 2,04,81,000ಮಾನವ ದಿನದಲ್ಲಿ, ಪ.ಜಾ 39,97,794, ಪ.ಪಂ. 29,62,407 ಹಾಗೂ ಮಹಿಳೆಯರು 1,12,10,381 ಆಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 86,042 ಕಾಮಗಾರಿ ಆರಂಭಿಸಲಾಗಿದೆ. ಇದರಲ್ಲಿ 497 ಕಾಮಗಾರಿ ಪೂರ್ಣಗೊಂಡಿದ್ದು, 85,048 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

ದಿನನಿತ್ಯ ಸರಾಸರಿ 2.5 ಲಕ್ಷ ಮಾನವ ದಿನಗಳ ಸೃಜನೆಯಾಗುತ್ತಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.


Share

You cannot copy content of this page