ಸಮಗ್ರ ಸುದ್ದಿ

ಕೃಷಿ ಮೇಳದ ಪರಿಷ್ಕೃತ ದಿನಾಂಕ ಪ್ರಕಟ; ನ.16 ರಿಂದ ಜಿಕೆವಿಕೆಯಲ್ಲಿ ಮೂರು ದಿನ ಕೃಷಿ ಮೇಳದ ಕಲರವ

Share

ಬೆಂಗಳೂರು:ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ (ಜಿಕೆವಿಕೆ) ನ.16 ರಿಂದ ನ. 18 ರವರೆಗೆ ಪ್ರಸಕ್ತ ಸಾಲಿನ ಕೃಷಿ ಮೇಳ ನಡೆಸಲು ತೀರ್ಮಾನಿಸಲಾಗಿದೆ

ರಾಜ್ಯಾದ್ಯಂತ ಭೀಕರ ಬರ ಆವರಿಸಿರುವ ಹಿನ್ನೆಲೆ ಕೃಷಿ ಮೇಳವನ್ನು ನ.13 ರಂದು ಒಂದೇ ದಿನಕ್ಕೆ‌ ಸೀಮಿತಗೊಳಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರ ನಿರ್ದೇಶನದ ಮೇರೆಗೆ ಈ ಹಿಂದಿನಂತೆ ಮೂರು ದಿನ ಕೃಷಿ ಮೇಳ ನಡೆಸಲಾಗುವುದು.‌ ಕೃಷಿ ಮೇಳಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವ ಸಲುವಾಗಿ ನ.13 ರ ಬದಲು ನ.16 ರಿಂದ 18 ರವರೆಗೆ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ( ಜಿಕೆವಿಕೆ) ಪ್ರಕಟಣೆ ತಿಳಿಸಿದೆ.

ಕೃಷಿ ನಾವಿನ್ಯತೆಗಳು ಹಾಗೂ  ಬರ ನಿರ್ವಹಣೆ ತಂತ್ರಗಳನ್ನು ರೈತರಿಗೆ ಪರಿಚಯಿಸುವ ಸಲುವಾಗಿ ಮೂರು ದಿನ ಕೃಷಿ ಮೇಳ ನಡೆಯಲಿದೆ. ತಾಕುಗಳ ಪ್ರದರ್ಶನ, ಹೊಸ ತಳಿಗಳು ಹಾಗೂ ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಗುವುದು.
ರೈತರಿಗೆ ಬರ ನಿರ್ವಹಣಾ ಕ್ರಮಗಳನ್ನು ಪರಿಚಯಿಸಲಾಗುವುದು.‌ ಪ್ರತಿಯೊಬ್ಬ ರೈತ ಬಾಂಧವರು ಮೂರು ದಿನಗಳ ಕೃಷಿಮೇಳದಲ್ಲಿ ಭಾಗವಹಿಸಿ, ಅಗತ್ಯ ಸಲಹೆಗಳೊಂದಿಗೆ ಬರ ಮೆಟ್ಟಿ ನಿಲ್ಲುವಂತಹ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದೆ.


Share

You cannot copy content of this page