ಸಮಗ್ರ ಸುದ್ದಿ

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ಕ್ಷೇತ್ರಗಳಲ್ಲಿನ 15 ಮುಖ್ಯ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ: ರಾಜೇಂದ್ರ ಚೋಳನ್

Share

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 15 ಪ್ರಮುಖ ರಸ್ತೆಗಳಲ್ಲಿ ಇಂದು ಬೆಳಿಗ್ಗೆಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.

ಸ್ವಚ್ಛತೆ ಕಾರ್ಯ ಕೈಗೊಂಡ ಸ್ಥಳಗಳ ವಿವರ:

ಸಿ.ವಿ. ರಾಮನ್ ನಗರ ಕ್ಷೇತ್ರದ- ವಾರ್ಡ್-114 ಮತ್ತು 80 ರ ವ್ಯಾಪ್ತಿಯ ಚನ್ನಸಂದ್ರ ಮುಖ್ಯ ರಸ್ತೆ, ಇಂದಿರಾನಗರ 6ನೇ ಮುಖ್ಯ ರಸ್ತೆ, 80 ಅಡಿ ರಸ್ತೆ ಮತ್ತು 12ನೇ ಮುಖ್ಯ ರಸ್ತೆ, ಕಸ್ತೂರಿನಗರ 2ನೇ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.

ಚಿಕ್ಕಪೇಟೆ ಕ್ಷೇತ್ರದ ವಾರ್ಡ್-119 ವ್ಯಾಪ್ತಿಯ ಎನ್.ಆರ್. ರಸ್ತೆ, ಮೋತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.

ಶಾಂತಿನಗರ ಕ್ಷೇತ್ರದ ವಾರ್ಡ್-111 ರ ವ್ಯಾಪ್ತಿಯ ಮದರ್ ತೇರೆಸಾ ರಸ್ತೆಯಲ್ಲಿ ಹಾಗೂ ಎಂ.ಜಿ. ರಸ್ತೆಗಳಲ್ಲಿ ಮತ್ತು ಸುತ್ತಮುತ್ತಲಿನ ರಸ್ತೆ, ಗಾಂಧಿನಗರ ಕ್ಷೇತ್ರದ ಕಾಟನ್ ಪೇಟೆ ವಾರ್ಡ್-120 ವ್ಯಾಪ್ತಿಯ ಶಾಂತಲಾ ಶಿಲ್ಕ್ ಸಿಗ್ನಲ್ ನಿಂದ ಕಾಟನ್ ಪೇಟೆ, ಪೊಲೀಸ್ ರಸ್ತೆ ವರೆಗೆ ಸ್ವಚ್ಚಗೊಳಿಸಲಾಗಿದೆ

ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯ ಛಲವಾದಿಪಾಳ್ಯ ಮುಖ್ಯ ರಸ್ತೆ ಮತ್ತು ಬಾಳೆಕಾಯಿ ಮಂಡಿ ಆವರಣದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಶಿವಾಜಿನಗರ ಕ್ಷೇತ್ರದ ಚರ್ಚ್ ರಸ್ತೆ, ಎಂ.ಎಂ. ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ.

*ಮಾಣಿಕ್ ಷಾ ಪರೇಡಡ್ ಮೈದಾನದಲ್ಲಿ ಸ್ವಚ್ಛತಾ ಕಾರ್ಯ: *

ಇದೇ ಜನವರಿ 26 ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಗಣರಾಜ್ಯೊತ್ಸವ ಕಾರ್ಯಕ್ರಮ ಅಂಗವಾಗಿ ಇಂದು ಮುಖ್ಯ ಅಭಿಯಂತರರಾದ ಶ್ರೀಮತಿ ಸುಗುಣ ರವರು ಹಾಗೂ ಇತರೆ ಅಧಿಕಾರಿಗಳು ಮಾಣಿಕ್ ಷಾ ಪರೇಡ್ ಮೈದಾನವನ್ನು ಪರಿಶಿಲನೆ ನಡೆಸಿದ್ದು, ರೋಲರ್ ನಿಂದ ನೆಲ ಸಮತಟ್ಟು ಗೊಳಿಸುವುದು, ಧೂಳು ಹರಡದಂತೆ ನೀರನ್ನು ಹಾಕುವುದು, ಸ್ವಚ್ಛತಾ ಕಾರ್ಯ ಹಾಗೂ ಇನ್ನಿತರೆ ಅಗತ್ಯ ಸಿದ್ಧತೆಗೆ ಕ್ರಮ ವಹಿಸಲಾಗುತ್ತಿದೆ.

ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು:

ಇಂದು ನಡೆದ ಸ್ವಚ್ಛತಾ ಕಾರ್ಯದಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಗಳು ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ.

ರೆಂಬೆ-ಕೊಂಬೆ ತೆರವು:

ಕೃಷ್ಣರಾವ್ ಪಾರ್ಕ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಒಣಗಿನ ರೆಂಬೆ-ಕೊಂಬೆಗಳನ್ನು ಅರಣ್ಯ ವಿಭಾಗದಿಂದ ತೆರವುಗೊಳಿಸಲಾಗಿದೆ.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಕೈಗೊಂಡ ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ ಜೆ.ಸಿ.ಬಿ. ಗಳು, ಲಾರಿಗಳು, ಟ್ರಾಕ್ಟರ್ ಗಳು, ಆಟೋ ಟಿಪ್ಪರ್ ಗಳನ್ನು ಉಪಯೋಗಿಸಿಕೊಂಡು ರಸ್ತೆ ಪಕ್ಕದ ಹಾಗೂ ಪಾದಚಾರಿ ಮಾರ್ಗದ ತ್ಯಾಜ್ಯ, ಚರಂಡಿಗಳಲ್ಲಿನ ಹೂಳು, ಉಪಯೋಗಿಸದ ತಳ್ಳುವ ಗಾಡಿಗಳು, ಪಾದಚಾರಿ ಒತ್ತುವರಿ ತೆರವು, ಪ್ಲಾಸ್ಟಿಕ್ ತ್ಯಾಜ್ಯ, ಅನುಪಯುಕ್ತ ವಸ್ತುಗಳು, ಅನುಪಯುಕ್ತ ಪೀಠೋಪಕರಣಗಳು, ಫ್ಲೆಕ್ಸ್ ಗಳು, ಬ್ಯಾನರ್ ಗಳು, ಮರದ ಒಣಗಿದ ರೆಂಬೆ ಕೊಂಬೆಗಳು, ಅನಧಿಕೃತ ಕೇಬಲ್ ವೈರ್ ಗಳನ್ನು ತೆರವುಗೊಳಿಸಲಾಗಿದೆ.

ಇಂದು ನಡೆದ ಸ್ವಚ್ಛತಾ ಕಾರ್ಯದಲ್ಲಿ ಆಯಾಯ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಡಿಜಿಎಂ ಗಳು, ಎ.ಜಿ.ಎಂ ಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಅರಣ್ಯ, ತೋಟಗಾರಿಕೆ ವಿಭಾಗಗಳ ಅಧಿಕಾರಿಗಳು, ಮೇಸ್ತ್ರಿಗಳು, ಗ್ಯಾಂಗ್ ಮೆನ್ ಗಳು, ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು ಕಾರ್ಯನಿರ್ವಹಿಸಿದ್ದಾರೆ.


Share

You cannot copy content of this page