ಸಮಗ್ರ ಸುದ್ದಿ

ಬೆಂಗಳೂರು ಜಲಮಂಡಳಿ ಎಂಜನಿಯರ್ ಸಂಘದ ತಾಂತ್ರಿಕ ದಿನಚರಿ ಬಿಡುಗಡೆ | ಸನ್ನಿವೇಶಗಳು ಎದುರಿಸಲು ನಾವು ಸದಾ ಸಿದ್ಧರಾಗಿರಬೇಕು: ಡಾ. ರಾಮ್‌ ಪ್ರಸಾತ್‌ ಮನೋಹರ್‌

Share

ಬೆಂಗಳೂರು: ನಾವು ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು. ನಾಗರೀಕರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನ ಮಾಡಲು ಮಂಡಳಿಯ ಪ್ರತಿಯೊಬ್ಬರು ಶ್ರಮಿಸಬೇಕೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ(ಬಿಡ್ಲ್ಯೂಎಸ್‌ಎಸ್‌ಬಿ) ಅಭಿಯಂತರರ ಸಂಘ ಕಾವೇರಿ ಭವನದಲ್ಲಿ ಆಯೋಜಿಸಿದ್ದ ತಾಂತ್ರಿಕ ದಿನಚರಿ – 2026 ಬಿಡುಗಡೆ ಹಾಗೂ ನಿವೃತ್ತರಾದ ಅಭಿಯಂತರರಿಗೆ ಅಭಿನಂದಿಸಿ ಮಾತನಾಡಿದ ಅವರು, ಜಲ ಮಂಡಳಿಯ ಉದ್ದೇಶ ನಾಗರೀಕರಿಗೆ ಗುಣಮಟ್ಟ ಕುಡಿಯುವ ನೀರಿನ ಪೂರೈಕೆ ಮಾಡುವುದು ಮತ್ತು ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡುವುದಾಗಿದೆ. ನಾವು ಈ ಕೆಲಸವನ್ನು ಬಹಳ ಶಿಸ್ತಿನಿಂದ ಮಾಡಬೇಕು. ಇದರ ಜತೆಗೆ ಬರ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು.

ಬೆಂಗಳೂರು ಇತಿಹಾಸದಲ್ಲಿ ಮಂಡಳಿ ಸಾಧನೆ ಕೂಡ ಸ್ಥಾನ ಪಡೆದಿದೆ. ಇದಕ್ಕೆ ಪ್ರಮುಖ ಕಾರಣ, ಎಂಜಿನಿಯರ್‌ಗಳ ಪರಿಶ್ರಮ, ದೂರದೃಷ್ಟಿಯಾಗಿದೆ. ಪ್ರತಿಯೊಬ್ಬರ ಶ್ರಮವನ್ನು ನಾವು ಮರೆಯುವಂತಿಲ್ಲ. ಇದೇ ರೀತಿ ಮುಂದೆ ಸಹ ನಿಮ್ಮ ಸಹಕಾರ ಬಹಳ ಮುಖ್ಯ. ಹೊಸ ಆಲೋಚನೆಗಳ ಮೂಲಕ ನಾವು ನೀಡುವ ಸೇವೆಯನ್ನು ಮತ್ತಷ್ಟು ಉತ್ತಮ ಪಡಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರು ಮತ್ತು CST ಅಧ್ಯಕ್ಷರಾದ ಡಾ.ಜಿ.ಮಾಧವಿ ಲತಾ ಮಾತನಾಡಿ, ಭಾರತದ ನಿರ್ಮಾಣಕ್ಕೆ ಸಿವಿಲ್‌, ಮೆಕಾನಿಲ್‌ ಎನ್ನದೇ ಪ್ರತಿಯೊಬ್ಬ ಎಂಜಿನಿಯರ್‌ಗಳ ಶ್ರಮ ಬಹಳಷ್ಟಿದೆ. ಒಂದು ಹೊಸ ಯೋಜನೆಯನ್ನು ಅನುಷ್ಠಾನ ಮಾಡಲು ಮುಂದಾದರೆ, ಎಷ್ಟೆಲ್ಲಾ ತೊಡಕುಗಳು ಎದುರಾಗುತ್ತವೆ ಎಂಬುದು ಎಂಜಿನಿಯರ್‌ಗಳಿಗೆ ಮಾತ್ರ ಅರ್ಥ ಆಗಲಿದೆ. ಇಂತಹ ಹಲವಾರು ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸುವವರೇ ನಿಜವಾದ ಎಂಜಿನಿಯರ್‌ಗಳ ಕೆಲಸ ಎಂದು ಎಂಜಿನಿಯರ್‌ಗಳ ಮಹತ್ವವನ್ನು ತಿಳಿಸಿದರು.

ನೀರಿನ ಸೋರಿಕೆ, ಅನಿರೀಕ್ಷಿತ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತಾ ದೂರದ ಕಾವೇರಿ ನದಿಯಿಂದ ಬೆಂಗಳೂರು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿರುವ ತಮ್ಮ ಕಾರ್ಯ ಶ್ಲಾಘನೀಯ ಎಂದರು.

ಚೆನಾಬ್ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾರ್ಯದಲ್ಲಿ 2005ರಿಂದ 2022ರವರೆಗೆ ತಾವು ತೊಡಗಿಸಿಕೊಂಡ ಅನುಭವವನ್ನು ಈ ಸಂದರ್ಭದಲ್ಲಿ ತೆರೆದಿಟ್ಟರು.

ಈ ಕಾರ್ಯಕ್ರಮದಲ್ಲಿ ಜಲ ಮಂಡಳಿ ಅಭಿಯಂತರರ ಸಂಘದ ಅಧ್ಯಕ್ಷ ಬಿ.ಸಿ.ಗಂಗಾಧರ ಪ್ರಾಸ್ತವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಿವೃತ್ತರಾದ ಎಂಜನಿಯರ್ ಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಬಿ.ಎಸ್.ದಲಾಯತ್, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ.ರಾಜಶೇಖರ, ಖಜಾಂಚಿ ಎಸ್‌.ಚಂದ್ರಶೇಖರ್ ಸೇರಿದಂತೆ ಮುಖ್ಯ ಎಂಜನಿಯರ್ ಗಳು ಹಾಗೂ ಎಂಜನಿಯರ್ ಗಳು ಇತರರು ಇದ್ದರು.


Share

You cannot copy content of this page