ಸಮಗ್ರ ಸುದ್ದಿ

ಯುರೋಪಿಯನ್ ಒಕ್ಕೂಟದ ಜೊತೆ ಫ್ರೀ ಟ್ರೇಡ್ ಒಪ್ಪಂದದಿಂದ ಕೃಷಿ, ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ:ಬಸವರಾಜ ಬೊಮ್ಮಾಯಿ

Share

ಬೆಂಗಳೂರು:ಯುರೋಪಿಯನ್ ಒಕ್ಕೂಟದ ಜೊತೆಗೆ ಫ್ರೀ ಟ್ರೇಡ್ ಒಪ್ಪಂದ ಮಾಡಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ಅವರು, ವಿಶ್ವ ಅತ್ಯಂತ ಅಭದ್ರತೆಯ ಸನ್ನಿವೇಶದಲ್ಲಿ ಕೂಡಿರುವ ಸಂದರ್ಭದಲ್ಲಿ ಭಾರತವನ್ನು ಅತ್ಯಂತ ಸದೃಢವಾಗಿರುವ ಆರ್ಥಿಕ ಶಕ್ತಿಯಾಗಿ ಮಾಡುತ್ತಿರುವಂಥದ್ದು, ಶೇ 7.5% ರಷ್ಟು ಆರ್ಥಿಕ ಬೆಳವಣಿಗೆ ಕಂಡಿರುವುದು ಭಾರತ ವಿಶ್ವದಲ್ಲಿಯೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಇವತ್ತು ಯುರೋಪಿಯನ್ ಯೂನಿಯನ್ ಜೊತೆ ಅಂದರೆ ಸುಮಾರು 27 ದೇಶಗಳ ಒಕ್ಕೂಟದ ಜೊತೆಗೆ ಫ್ರೀ ಟ್ರೇಡ್ ಅಗ್ರಿಮೆಂಟ್ (ಎಫ್ ಟಿಎ) ನ್ನು ಮಾಡಿರುವುದು ಐತಿಹಾಸಿಕವಾಗಿದೆ. ಒಂದು ದೊಡ್ಡ ಒಕ್ಕೂಟ ಮತ್ತು ಒಂದು ದೊಡ್ಡ ದೇಶದ ನಡುವೆ ಎಲ್ಲ ರಂಗದಲ್ಲಿ ಫ್ರೀ ಟ್ರೇಡ್ ಒಪ್ಪಂದ ಆಗಿದ್ದು ಇದರಿಂದ ನಮ್ಮ ಕೃಷಿಗೆ, ವ್ಯಾಪಾರಸ್ಥರಿಗೆ, ವಿಶೇಷವಾಗಿ ಸಣ್ಣ ವ್ಯಾಪಾರಸ್ಥರಿಗೆ ಯುರೋಪಿಯನ್ ಮಾರುಕಟ್ಟೆ ಸುಲಭವಾಗಿ ಸಿಗುವಂತಹ ವ್ಯವಸ್ಥೆ ಆಗಿದೆ ಎಂದು ತಿಳಿಸಿದ್ದಾರೆ.

ಇದರಿಂದ ಭಾರತದ 140 ಕೋಟಿ ಜನರಿಗೆ ಯುರೋಪಿನ ಎಲ್ಲ ದೇಶಗಳ ಜನರ ಜೊತೆ ಬಾಂಧ್ಯವ ಬೆಳೆಯುವುದು ಮತ್ತು ಅಧಿಕ ವ್ಯವಹಾರ ನಡೆಸಲು ಅನುಕೂಲ ಆಗಲಿದೆ. ಇದು ಬೇರೆ ದೇಶಗಳಿಂದ ಅಭದ್ರತೆ, ಟ್ಯಾರಿಫ್ ಹೇರುವುದಕ್ಕೆ ಸರಿಯಾದ ಉತ್ತರ ಮತ್ತು ಮಾರ್ಗವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅತ್ಯಂತ ಸಮರ್ಥವಾಗಿರುವ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅವರ ಕನಸು ವಿಕಸಿತ ಭಾರತ ಕಡೆಗೆ ತೆಗೆದುಕೊಂಡು ಹೋಗುವುದಕ್ಕೆ ದೊಡ್ಡ ಹೆಜ್ಜೆ ಇಟ್ಟಂತಾಗಿದೆ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ‌.


Share

You cannot copy content of this page