ಸಮಗ್ರ ಸುದ್ದಿ

ಶಿವರಾತ್ರಿ ಹಬ್ಬದ ಪ್ರಯುಕ್ತ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

Share

ಬೆಂಗಳೂರು: ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರುವರಿ 13 ರಂದು ಮಧ್ಯಾಹ್ನ 12.30 ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 06:45ಕ್ಕೆ ಮಡಗಾಂವ್ ತಲುಪಲಿದೆ.

ರೈಲು ಸಂಖ್ಯೆ 06508 ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರವರಿ 16 ರಂದು ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್’ನಿಂದ ಹೊರಟು, ಮರುದಿನ ಬೆಳಿಗ್ಗೆ 04:45ಕ್ಕೆ ಯಶವಂತಪುರವನ್ನು ತಲುಪಲಿದೆ.

ಈ ವಿಶೇಷ ರೈಲುಗಳಿಗೆ ಚಿಕ್ಕಬಾಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.

ಈ ರೈಲು 20 ಬೋಗಿಗಳನ್ನು ಒಳಗೊಂಡಿದ್ದು , ಇದರಲ್ಲಿ 1 ಪ್ರಥಮ ದರ್ಜೆ ಎಸಿ ಕಮ್‌ ಎಸಿ 2-ಟೈರ್ ಬೋಗಿ, 2 ಎಸಿ 2-ಟೈರ್ ಬೋಗಿಗಳು, 2 ಎಸಿ 3-ಟೈರ್ ಬೋಗಿಗಳು, 9 ಸ್ಲೀಪರ್ ಕ್ಲಾಸ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಸೇರಿವೆ.


Share

You cannot copy content of this page