ಸಮಗ್ರ ಸುದ್ದಿ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 5,000 ಕಿ.ಮೀ. ಓಟ ಶ್ಲಾಘನೀಯ: ಮಹೇಶ್ವರ್ ರಾವ್

Share

ಬೆಂಗಳೂರು: ಯುವ ಇಂಡೋ–ಆಸ್ಟ್ರೇಲಿಯನ್ ಕ್ರೀಡಾಪಟು ಓಂ ಸತಿಜಾ ಅವರು ಯುವಕರಿಗೆ ಪ್ರೇರಣೆ ನೀಡುವ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶದಾದ್ಯಂತ ಐತಿಹಾಸಿಕ 5,000 ಕಿ.ಮೀ. ಓಟವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.

‘ಒನ್ ರನ್ ಇಂಡಿಯಾ’ ಉಪಕ್ರಮದಡಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 5,000 ಕಿ.ಮೀ. ದೂರದ ಅಪರೂಪದ ಓಟವನ್ನು ಕೈಗೊಂಡಿರುವ ಓಂ ಸತಿಜಾ ಅವರು ಬೆಂಗಳೂರಿಗೆ ಆಗಮಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ, ತಮ್ಮ ಓಟದ ಉದ್ದೇಶ ಹಾಗೂ ಆಶಯಗಳ ಕುರಿತು ಚರ್ಚಿಸಿದರು.

ಯುವಕರಿಗೆ ಪ್ರೇರಣೆ ನೀಡುವುದು, ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಬೆಂಬಲ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಓಟ ಅತ್ಯಂತ ಶ್ಲಾಘನೀಯವಾಗಿದ್ದು, ನಾಳೆ ಕೋರಮಂಗಲದ ಉದ್ಯಾನವನದಲ್ಲಿ ‘ರನ್ ಫಾರ್ ಸೆಲಿಬ್ರೇಷನ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಸ್ಟ್ರೇಲಿಯಾದಿಂದ ಭಾರತಕ್ಕೆ ಆಗಮಿಸಿರುವ ಅವರು, ದಕ್ಷಿಣದಿಂದ ಉತ್ತರದವರೆಗೆ ಓಟದ ಮೂಲಕ ಭಾರತದಲ್ಲಿನ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅನುಭವಿಸುತ್ತಿದ್ದಾರೆ ಎಂದು ಮಹೇಶ್ವರ್ ರಾವ್ ಹೇಳಿದರು.


Share

You cannot copy content of this page