ಸಮಗ್ರ ಸುದ್ದಿ

ನೈಋತ್ಯ ರೈಲ್ವೆ ಮಕ್ಕಾಜಿಪಲ್ಲಿ –ಧರ್ಮಾವರಂ ಡಬಲ್ ಲೈನ್ ಕಾರ್ಯಾರಂಭ; ಪೆನುಕೊಂಡ–ಧರ್ಮಾವರಂ ಯೋಜನೆ ಸಂಪೂರ್ಣ

Share

ಬೆಂಗಳೂರು: ನೈಋತ್ಯ ರೈಲ್ವೆಯು ಪೆನುಕೊಂಡ–ಧರ್ಮಾವರಂ ಡಬ್ಲಿಂಗ್ ಯೋಜನೆಯ ಅಂಗವಾಗಿ ಮಕ್ಕಾಜಿಪಲ್ಲಿ ಮತ್ತು ಧರ್ಮಾವರಂ ನಿಲ್ದಾಣಗಳ ನಡುವಿನ 30.04 ಕಿಮೀ ಉದ್ದದ ಜೋಡಿ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು (CRS) ನಡೆಸಿದ ಶಾಸನಬದ್ಧ ಪರಿಶೀಲನೆಯ ನಂತರ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ.

ಈ ಯೋಜನೆಯಡಿಯಲ್ಲಿ 66 ಸಣ್ಣ ಸೇತುವೆಗಳು, 15 ರಸ್ತೆ ಕೆಳಸೇತುವೆಗಳು (RUBs), ಒಂದು ಪಾದಚಾರಿ ಮೇಲ್ಸೇತುವೆ (FOB) ಹಾಗೂ ಐದು ಮಾರ್ಗಗಳನ್ನು ಹೊಂದಿರುವ ನಿಲ್ದಾಣ ಯಾರ್ಡ್ ಅಭಿವೃದ್ಧಿಪಡಿಸಲಾಗಿದೆ. ಜೋಡಿ ಮಾರ್ಗಕಾಮಗಾರಿಯ ಜೊತೆಗೆ, ಕಾರ್ಯಾಚರಣಾ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಕ್ಕಾಜಿಪಲ್ಲಿ–ನಾಗಸಮುದ್ರ ನಡುವೆ ಒಂದು ಮಧ್ಯಂತರ ಬ್ಲಾಕ್ ಹಟ್ (IBH) ಕೂಡ ಸ್ಥಾಪಿಸಿ ಕಾರ್ಯಾರಂಭ ಮಾಡಲಾಗಿದೆ.

ಧರ್ಮಾವರಂ ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಕೈಗೊಂಡ ಕಾಮಗಾರಿಗಳಿಗೆ ದಕ್ಷಿಣ ಮಧ್ಯ ರೈಲ್ವೆಯೊಂದಿಗೆ ಸಮನ್ವಯ ಸಾಧಿಸಲಾಗಿದ್ದು, ಎರಡೂ ವಲಯಗಳ ರೈಲ್ವೆ ಸುರಕ್ಷತಾ ಆಯುಕ್ತರೊಂದಿಗೆ ಅಗತ್ಯ ಸಂಯೋಜನೆ ನಡೆಸಲಾಗಿದೆ.

ಈ ವಿಭಾಗದಲ್ಲಿ ಗರಿಷ್ಠ 121 ಕಿಮೀ ವೇಗದಲ್ಲಿ ವೇಗ ಪರೀಕ್ಷೆ ನಡೆಸಲಾಗಿದ್ದು, ಆಸಿಲೇಶನ್ ಮಾನಿಟರಿಂಗ್ ಸಿಸ್ಟಮ್ (OMS) ನಲ್ಲಿ ಯಾವುದೇ ಅಸಹಜ ದಾಖಲಾಗಿಲ್ಲ. ಪರಿಶೀಲನೆ ಹಾಗೂ ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ, CRS ಈ ಮಾರ್ಗವನ್ನು ಗರಿಷ್ಠ 110 ಕಿಮೀ ವೇಗದಲ್ಲಿ ಸಂಚರಿಸಲು ಅನುಮೋದನೆ ನೀಡಿದೆ.

ಈ ವಿಭಾಗದ ಕಾರ್ಯಾರಂಭದೊಂದಿಗೆ ಪೆನುಕೊಂಡ–ಧರ್ಮಾವರಂ ಜೋಡಿ ಯೋಜನೆ ಸಂಪೂರ್ಣಗೊಂಡಿದೆ. ವಿಶೇಷವಾಗಿ, ನೈಋತ್ಯ ರೈಲ್ವೆ ಈ ವಿಭಾಗವನ್ನು ಗರಿಷ್ಠ 110 ಕಿಮೀ ಅನುಮೋದಿತ ವೇಗದಲ್ಲಿ ತೆರೆಯಲಾಗಿದೆ ಎಂಬುದು ಗಮನಾರ್ಹವಾಗಿದೆ.

ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಬೆಂಗಳೂರು ವಿಭಾಗದ ತಂಡ ಹಾಗೂ ಪ್ರಧಾನ ಕಚೇರಿಯ ಪ್ರಧಾನ ವಿಭಾಗ ಮುಖ್ಯಸ್ಥರು ನೀಡಿದ ಅಮೂಲ್ಯ ಸಹಕಾರಕ್ಕಾಗಿ ನೈಋತ್ಯ ರೈಲ್ವೆಯ ನಿರ್ಮಾಣ ಸಂಸ್ಥೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.


Share

You cannot copy content of this page