ಸಮಗ್ರ ಸುದ್ದಿ

ರಾಜ್ಯದ ಗ್ರಾಮೀಣ ಭಾಗದಲ್ಲಿ ನಬಾರ್ಡ್ ಆರೋಗ್ಯ ಜಾಗೃತಿ ಅಭಿಯಾನಗಳನ್ನು ನಡೆಸಲಿ: ದಿನೇಶ್ ಗುಂಡೂರಾವ್ | ಗ್ರಾಮೀಣ ಭಾಗದ ಅಭಿವೃದ್ಧಿಗೆ ನಬಾರ್ಡ್ ಕೊಡುಗೆ ಅನನ್ಯ

Share

ಬೆಂಗಳೂರು: ಬೆಂಗಳೂರಿನ ನಬಾರ್ಡ್ ಪ್ರಾದೇಶಿಕ ಕಚೇರಿಯಲ್ಲಿ, ನಬಾರ್ಡ್ ವತಿಯಿಂದ ಕೃಷಿ ಸಂಸ್ಕರಣೆಯಲ್ಲಿ ಮಹಿಳಾ ರೈತರು ಮತ್ತು ಎಂ.ಎಸ್.ಎಂ.ಇ ಗಳ ಬಲವರ್ಧನೆಗೆ ಸಮಗ್ರ ಸಾಲ ವ್ಯವಸ್ಥೆ ಕುರಿತು ನಡೆದ State Credit Seminar – 2026 ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ನಂತರ ಮಾತನಾಡಿದ ಈ ಕಾರ್ಯಕ್ರಮದ ಪ್ರಸೆಂಟೇಶನ್ ಬಹಳ ವಿಶೇಷವಾದದ್ದು. ಗ್ರಾಮೀಣ ಭಾಗದ ಅಭಿವೃದ್ಧಿಗೆ ನಬಾರ್ಡ್ ಕೊಡುಗೆ ಅನನ್ಯ. 1982 ರಿಂದ ಕೆಲಸ ಮಾಡುತ್ತಿರುವ ನಬಾರ್ಡ್ ಶೇ.99 ರಷ್ಟು ಗುರಿ ಸಾಧಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ, ರಸ್ತೆ, ಹಣಕಾಸಿನ ನೆರವು, ಈ ಎಲ್ಲ ವಿಭಾಗಗಳಲ್ಲಿ ನಬಾರ್ಡ್ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದರು.

ನಮ್ಮ ಆರೋಗ್ಯ ಇಲಾಖೆಗೂ ನಬಾರ್ಡ್ ಸಾಕಷ್ಟು ಅನುದಾನ ನೀಡುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡುವುದಕ್ಕೆ, ರಸ್ತೆಗಳ ನಿರ್ಮಾಣಕ್ಕೆ ಸಹಕಾರ ನೀಡುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯದ ಕುರಿತು ಜಾಗೃತಿ ಅಭಿಯಾನದತ್ತಲೂ ನಬಾರ್ಡ್ ಕಾರ್ಯ ನಿರ್ವಹಿಸಲಿ. ನಬಾರ್ಡ್ ಇಕೆಸಿಸಿ ಟೆಕ್ನಾಲಜಿ ಬಳಕೆ ಮಾಡಿಕೊಳ್ಳುವ ಮೂಲಕ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ರೈತರಿಗೆ ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಿದೆ. ರಾಜ್ಯದ ಕಟ್ಟಕಡೆಯ ರೈತನಿಗೂ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಆಶಯ ಎಂದು ಹೇಳಿದರು

ಇದಕ್ಕೂ ಮುನ್ನ ಮಳಿಗೆಗಳನ್ನು ಉದ್ಘಾಟನೆ ಮಾಡಿದ ಸಚಿವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಬಾರ್ಡ್ ಸಹಾಯಧನದಿಂದ ಸಣ್ಣ ಉದ್ಯಮ ನಡೆಸುತ್ತಿರುವ ಸಹಕಾರಿ ಸಂಘಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅರ್ ಬಿಐ ಜನರಲ್ ಮ್ಯಾನೇಜರ್ ಕಾರ್ತಿಕೇಯನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಭವೇಂದ್ರ ಕುಮಾರ್, ನಬಾರ್ಡ್ ಚೀಪ್ ಜನರಲ್ ಮ್ಯಾನೇಜರ್ ಸುರೇಂದ್ರ ಬಾಬು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page