ಸಮಗ್ರ ಸುದ್ದಿ

ಕೆಸಿ ವ್ಯಾಲಿ ಯೋಜನೆಯಡಿಯಲ್ಲಿ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಪರಿಶೀಲಿಸ ಲಾಗುವುದು: ಸಚಿವ ಎನ್.ಎಸ್. ಭೋಸರಾಜು

Share

ಬೆಂಗಳೂರು :ಬೆಂಗಳೂರು ನಗರ ಕೆ ಮತ್ತು ಸಿ ವ್ಯಾಲಿಯ ಸಂಸ್ಕರಣಾ ಘಟಕದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಆನೇಕಲ್ ತಾಲ್ಲೂಕಿನ 67 ಕೆರೆಗಳನ್ನು ಹಾಗೂ ಕನಕಪುರ ತಾಲ್ಲೂಕಿನ ರಾವುತನಹಳ್ಳಿ ಮತ್ತು ಮಾವತ್ತೂರು ಕೆರೆಗಳನ್ನು ತುಂಬಿಸುವ ಕಾಮಗಾರಿಯಲ್ಲಿ ಈಗಾಗಲೇ ಬಿ.ಡಬ್ಲ್ಯೂ.ಎಸ್.ಎಸ್.ಬಿ  ಎಸ್ ಟಿಪಿ ಯಿಂದ ಲಭ್ಯವಿರುವ ನೀರಿನಿಂದ ಸುಮಾರು 50 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಸ್.ಗೋಪಿನಾಥ್ ರವರು ನಿಯಮ 72 ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು ಕೆಸಿ ವ್ಯಾಲಿ ಎಸ್ ಟಿಪಿ ಯಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ವತಿಯಿಂದ ಉನ್ನತೀಕರಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ನೀರು ಲಭ್ಯವಾಗಿರುವುದಿಲ್ಲ.ಮುಂದಿನ ದಿನಗಳಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ  ಕಾಮಗಾರಿ ಪೂರ್ಣಗೊಂಡು ಹೆಚ್ಚಿನ ನೀರು ಕೆಸಿ ವ್ಯಾಲಿ ಎಸ್ ಟಿಪಿ ಯಲ್ಲಿ ಲಭ್ಯವಾದಾಗ, ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಕೆಲವು ಗ್ರಾಮದ ಕೆರೆಗಳಾದ ವಾಬಸಂದ್ರ ಕೆರೆ, ತಿರುಪಾಳ್ಯ, ಗವಿ ಕೆರೆ ಮತ್ತು ಯಾರಂಡಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಲು ಪರಿಶೀಲಿಸಲಾಗುವುದು ಎಂದು ಉತ್ತರಿಸಿದರು.


Share

You cannot copy content of this page