ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ ಪಂದ್ಯಗಳಲ್ಲಿಯೂ ಮೃತರ ಸ್ಮರಣಾರ್ಥ 11 ಆಸನ ಮೀಸಲಿಡಲು ಕೆಎಸ್‌ಸಿಎ ನಿರ್ಧಾರ

Share

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ಸ್ಮರಣಾರ್ಥವಾಗಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಮೀಸಲಿಡುವುದಾಗಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

ಚಿನ್ನಸ್ವಾಮಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ 11 ಆಸನಗಳನ್ನು ಮೀಸಲಿಟ್ಟು, ಈ ಆಸನಗಳನ್ನು ಮಾರಾಟ ಮಾಡದಿರಲು ಕೆಎಸ್‌ಸಿಎ ನಿರ್ಧರಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳ ನಡೆಯುವ ಸಂದರ್ಭದಲ್ಲೂ 11 ಆಸನಗಳನ್ನು ಮೀಸಲಿಡಲಾಗಿದೆ. ಜೊತೆಗೆ ಮುಖ್ಯದ್ವಾರದಲ್ಲಿ ಬೋರ್ಡ್ ಅಳವಡಿಕೆ ಮಾಡಿ ಅದರಲ್ಲಿ ಮೃತರ ಹೆಸರನ್ನು ನಮೂದಿಸಲಾಗಿದೆ.

ಆಟಗಾರರು ಅಭ್ಯಾಸ ಪಂದ್ಯದ ವೇಳೆ, 11 ನಂಬರ್‌ನ ಜರ್ಸಿಯನ್ನು ಧರಿಸಲಿದ್ದಾರೆ. ಇದರ ಜೊತೆಗೆ ಉದ್ಘಾಟನಾ ಪಂದ್ಯದ ವೇಳೆ, ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿ ಒಂದು ನಿಮಿಷ ಮೌನಾಚರಣೆ ಮಾಡಲಿದೆ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಬಾರಿ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿ, 11 ಮಂದಿ ಸಾವನ್ನಪ್ಪಿದ್ದರು.


Share

You cannot copy content of this page